ಕಣಿವೆ, ನ. ೩ : ನಂಜರಾಯಪಟ್ಟಣದ ಐತಿಹಾಸಿಕ ಶ್ರೀ ವೀರಭದ್ರೇಶ್ವರ ದೇವಾಲಯದ ನಿರ್ಮಾಣಕ್ಕೆ ಮುಹೂತÀð ಕೂಡಿ ಬಂದಿದೆ. ಟಿಪ್ಪು ಸುಲ್ತಾನ್ ಸೇನೆಯ ಧಾಳಿಗೆ ತುತ್ತಾಗಿತ್ತು ಎನ್ನಲಾದ ಈ ದೇವಾಲಯ ನಿರ್ಮಾಣದ ಭೂಮಿ ಪೂಜೆ ತಾ. ೬ ರಂದು ಅರಸೀಕೆರೆ ಕೋಡಿ ಮಠದ ಪೀಠಾಧಿಪತಿ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಸಾನಿಧ್ಯದಲ್ಲಿ ನೆರವೇರಲಿದೆ ಎಂದು ದೇವಾಲಯದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎನ್.ಕೆ.ಮೋಹನ್ ಕುಮಾರ್ ತಿಳಿಸಿದ್ದಾರೆ.

ದುಬಾರೆ ರಸ್ತೆಯಂಚಿನಲ್ಲಿ ಹಾನಿಗೀಡಾದ ದೇವಾಲಯವನ್ನು ನಂಜುAಡೇಶ್ವರ ದೇವಾಲಯದ ಪ್ರಾಂಗಣದ ಕುಬೇರ ಸ್ಥಾನದಲ್ಲಿ ನಿರ್ಮಿಸಲಾಗುವದು. ನಂಜುAಡೇಶ್ವರ ದೇವಾಲಯದ ಅಭಿವೃದ್ಧಿ ಸಮಿತಿಯ ಅಧೀನದಲ್ಲಿಯೇ ಈ ದೇವಾಲಯವನ್ನು ಅಭಿವೃದ್ಧಿ ಗೊಳಿಸಲಾಗುವದು. ದಿನಂಪ್ರತೀ ಪೂಜಾ ವಿಧಿಗಳು ಹಾಗು ವಾರ್ಷಿಕ ಪೂಜೋತ್ಸವ ಹಾಗೂ ಜಾತ್ರೋತ್ಸವದ ಸಿದ್ಧತೆಗೆ ಅನುಕೂಲವಾಗುವಂತೆ ಒಂದೇ ಆವರಣದಲ್ಲಿ ದೇವಾಲಯದ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ತಾ.೬ ರಂದು ಸಂಜೆ ೬ ಗಂಟೆಗೆ ಗೋಧೂಳಿ ಲಗ್ನದಲ್ಲಿ ದೇವಾಲಯದ ಭೂಮಿ ಪೂಜೆ ಹಾಗೂ ಕೋಡಿ ಮಠದ ಶ್ರೀಗಳ ಪಾದಪೂಜೆ ಜರುಗಲಿದೆ ಎಂದು ಮೋಹನ ಕುಮಾರ್ ಹಾಗೂ ಕಾರ್ಯದರ್ಶಿ ಮುರುಳಿ ಮಾದಯ್ಯ ತಿಳಿಸಿದ್ದಾರೆ.