ಮಡಿಕೇರಿ, ನ. ೪: ಚೆಯ್ಯಂಡಾಣೆ, ಚೇಲಾವರ ನಡುವೆ ಚೋಮನ ಬೆಟ್ಟ ತಪ್ಪಲಿನ ಸೇತುವೆಯೊಂದು ಕುಸಿದು ಆ ಭಾಗದ ಜನತೆಗೆ ದೈನಂದಿನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಕಳೆದ ವರ್ಷ ಮಳೆಗಾಲದಲ್ಲಿ ಈ ಸೇತುವೆ ಹಾನಿಗೊಂಡಿದ್ದಾಗ, ದುರಸ್ತಿ ಕೆಲಸ ಮಾಡಿಸಿದ್ದು, ಆನಂತರ ಮತ್ತೆ ಕೇವಲ ಆರು ದಿನಗಳಲ್ಲಿ ಮತ್ತೆ ಹಾನಿಗೊಂಡಿದ್ದಾಗಿ ಆರೋಪಿಸಿರುವ ಗ್ರಾಮಸ್ಥರು, ಕೂಡಲೇ ಸರಿಪಡಿಸುವಂತೆ ಒತ್ತಾಯಿಸಿದ್ದಾರೆ.