ಸೋಮವಾರಪೇಟೆ,ನ.೪: ತಾಲೂಕಿನ ಅರೆಯೂರು ಗ್ರಾಮದ ಅಂಚಿಗೆ ಹೊಂದಿಕೊAಡಿರುವ ಯಡವನಾಡು ಮೀಸಲು ಅರಣ್ಯದಿಂದ ಅಕ್ರಮವಾಗಿ ಬೀಟೆ ಮರವನ್ನು ಕಳ್ಳತನ ಮಾಡಿ ಸಾಗಿಸುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿರುವ ಅರಣ್ಯ ಇಲಾಖಾಧಿಕಾರಿಗಳು, ಬೀಟೆ ಮರ ಸಹಿತ ಓರ್ವ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.ಇದೇ ಪ್ರಕರಣಕ್ಕೆ ಸಂಬAಧಿಸಿ ದಂತೆ ಇತರ ಐವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಒಟ್ಟು ೬ ಮಂದಿಯ ವಿರುದ್ಧ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ. ನಿನ್ನೆ ಸಂಜೆ ವೇಳೆಯಲ್ಲಿ ಯಡವನಾಡು ಮೀಸಲು ಅರಣ್ಯದಿಂದ ಸುಮಾರು ೩೦ ಸಾವಿರ ಮೌಲ್ಯದ ಬೀಟೆ ಮರವನ್ನು ಅಕ್ರಮವಾಗಿ ಕಡಿದು ಸಾಗಾಟ ಗೊಳಿಸುತ್ತಿದ್ದ ಸಂದರ್ಭ ಅರಣ್ಯಾಧಿಕಾರಿಗಳು ಧಾಳಿ ನಡೆಸಿದ್ದಾರೆ. ಈ ಸಂದರ್ಭ ನೇಗಳ್ಳೆ ಗ್ರಾಮದ ಭೋಜ ಎಂಬವರ ಪುತ್ರ ಸಣ್ಣಪ್ಪ ಅಲಿಯಾಸ್ ರವಿ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ.

ಉಳಿದ ಆರೋಪಿಗಳಾದ ನೇಗಳ್ಳೆ ಗ್ರಾಮದ ಜೋಯಪ್ಪ ಅವರ ಪುತ್ರ ಮಧು, ಮನು, ಅಪ್ಪಣ್ಣಿ ಅವರ ಪುತ್ರ ಸಿಂಧು, ಗಿರಿಯಪ್ಪ ಅವರ ಪುತ್ರ ಮದನ್

(ಮೊದಲ ಪುಟದಿಂದ) ಅಲಿಯಾಸ್ ಗುಂಡ ಮತ್ತು ಬೆಳ್ಳಿಯಪ್ಪ ಅವರ ಪುತ್ರ ಎಲ್.ಬಿ. ರೋಹಿತ್ ಅವರುಗಳು ತಪ್ಪಿಸಿಕೊಂಡಿದ್ದಾರೆ.

ಬAಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆ, ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಶಮ, ಹುದುಗೂರು ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಸತೀಶ್‌ಕುಮಾರ್, ಅರಣ್ಯ ರಕ್ಷಕ ರಾಜಣ್ಣ, ಕಿರಣ್, ಲೋಕೇಶ್, ಚಾಲಕ ನಂದೀಶ್ ಅವರುಗಳು ಭಾಗವಹಿಸಿದ್ದರು.