ಮಡಿಕೇರಿ, ನ.೪: ಮಡಿಕೇರಿ ಆಕಾಶವಾಣಿ ಕಾರ್ಯಕ್ರಮಗಳು ಅಂತರ್ಜಾಲದ ಮೂಲಕ ಕೇಳಬಹುದಾಗಿದೆ. ವಿಶ್ವದ ಯಾವುದೇ ಭಾಗದಲ್ಲಿ ಶ್ರೋತೃಗಳು ಆಲಿಸಲು ಅವಕಾಶವಿದೆ. ಪ್ಲೇಸ್ಟೋರ್‌ನಿಂದ ನ್ಯೂಸ್‌ಆನ್‌ಏರ್ ಆಪ್‌ನ್ನು ಡೌನ್‌ಲೋಡ್ ಮಾಡಿಕೊಂಡು ಆಂಡ್ರೀಯಾಡ್ ಮೊಬ್ಯೆಲ್‌ಗಳ ಮೂಲಕ ಮಡಿಕೇರಿ ಬಾನುಲಿಯ ಎಲ್ಲಾ ಕಾರ್ಯಕ್ರಮಗಳನ್ನು ಕೇಳಬಹುದು. ಇದರಂತೆ ದೇಶದ ಮತ್ತು ರಾಜ್ಯದ ಆಕಾಶವಾಣಿ ಕಾರ್ಯಕ್ರಮಗಳು ಅಂತರ್ಜಾಲದ ಮೂಲಕ ಲಭ್ಯವಾಗುತ್ತಿವೆ ಎಂದು ಕಾರ್ಯಕ್ರಮ ನಿರ್ವಾಹಕರಾದ ವಿಜಯ್ ಅಂಗಡಿ ತಿಳಿಸಿದ್ದಾರೆ.