ಮಡಿಕೇರಿ, ನ. ೨: ಕೊಡಗು ಜಿಲ್ಲಾ ಪಂಚಾಯಿತಿಯ ನೂತನ ಕಚೇರಿಗೆ, ವಿವಿಧ ಇಲಾಖೆಗಳಿಗೆ ಸಂಬAಧಿಸಿದ ಹಳೆಯ ಕಡತಗಳನ್ನು ಸುರಕ್ಷಿತವಾಗಿ ಕೊಂಡೊಯ್ಯುವ ಕೆಲಸ ನಡೆದಿದ್ದು, ಸೋಮವಾರದಿಂದ ದೂರವಾಣಿ ಹಾಗೂ ಅಂತರ್ಜಾಲ ವ್ಯವಸ್ಥೆಯೂ ಸಮರ್ಪಕವಾಗಿ ಅಳವಡಿಸಿ, ದೈನಂದಿನ ಕೆಲಸಕಾರ್ಯ ಆರಂಭಿಸಲಾಗುವದು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಲಕ್ಷಿö್ಮÃಪ್ರಿಯ ತಿಳಿಸಿದ್ದಾರೆ.ಜಿಲ್ಲಾ ಪಂಚಾಯತ್ ನೂತನ ಕಟ್ಟಡಕ್ಕೆ ಬಹುತೇಕ ವಸ್ತುಗಳನ್ನು ಕೋಟೆ ಆವರಣದ ಅರಮನೆಯಿಂದ ಸಾಗಿಸಿದ್ದು, ಆಯಾ ಕಚೇರಿಗಳಲ್ಲಿ ಎಲ್ಲವುಗಳನ್ನು ಜೋಡಿಸಿಡುವ ಕೆಲಸ ನಡೆಯುತ್ತಿದೆ ಎಂದು; ಇಂದು ಅವರು ತಮ್ಮ ನೂತನ ಕಚೇರಿಯಲ್ಲಿ ಕರ್ತವ್ಯದ ನಡುವೆ ‘ಶಕ್ತಿ’ಗೆ ಮಾಹಿತಿ ನೀಡಿದರು. ಸೋಮವಾರದಿಂದ ಕ್ಯಾಂಟೀನ್ ಕೂಡ ಆರಂಭಗೊಳ್ಳಲಿದೆ ಎಂದು ಅವರು ವಿವರಿಸಿದರು. ಅಲ್ಲದೆ, ಅಂತರ್ಜಾಲ ಇತ್ಯಾದಿಯಾಗಿ ಬಿಎಸ್‌ಎನ್‌ಎಲ್ ಸಿಬ್ಬಂದಿ ಅಗತ್ಯ ವ್ಯವಸ್ಥೆ ಕಲ್ಪಿಸುತ್ತಿದ್ದು, ನೂತನ ಕಟ್ಟಡದಲ್ಲಿ ಈಗಾಗಲೇ ಜನರೇಟರ್, ವಿದ್ಯುತ್, ನೀರಿನ ಸೌಲಭ್ಯ ಇನ್ನಿತರ ಅನುಕೂಲ ಒದಗಿಸಲಾಗಿದೆ ಎಂದು ಅವರು ವಿವರಿಸಿದರು. ಈಗಾಗಲೇ ‘ಲಿಫ್ಟ್’ ವ್ಯವಸ್ಥೆ ಕೂಡ ಕಾರ್ಯನಿರ್ವಹಿಸುತ್ತಿದ್ದು, ಜಿ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಕ್ಷೇತ್ರದ ಶಾಸಕರ ಸಹಿತ ಇಬ್ಬರು ಮೇಲ್ಮನೆ ಸದಸ್ಯರು, ಜಿ.ಪಂ. ಸ್ಥಾಯಿ ಸಮಿತಿಗಳ ಅಧ್ಯಕ್ಷರು ಕಚೇರಿಗಳನ್ನು ಬಳಸಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು.
ಉಪಾಧ್ಯಕ್ಷೆ ಹರ್ಷ: ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಕೂಡ ನೂತನ ಕಚೇರಿಗೆ ಆಗಮಿಸುವದರೊಂದಿಗೆ ತಮ್ಮ ಕೊಠಡಿಗೆ ಅವಶ್ಯಕ ವ್ಯವಸ್ಥೆ ಕಲ್ಪಿಸಿಕೊಡುವ ದಿಸೆಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೊತೆಯಲ್ಲಿ ಇಂದು ಸಮಾಲೋಚನೆ ನಡೆಸಿದರು.
(ಮೊದಲ ಪುಟದಿಂದ) ಈ ವೇಳೆ ‘ಶಕ್ತಿ’ಯೊಂದಿಗೆ ಅನಿಸಿಕೆ ವ್ಯಕ್ತಪಡಿಸಿದ ಅವರು, ಇರುವಷ್ಟು ಅಧಿಕಾರದ ಅವಧಿಯಲ್ಲಿ ನೂತನ ಕಚೇರಿಯಲ್ಲಿ ಕಾಯನಿರ್ವಹಿಸಲು ತಮಗೆ ಹರ್ಷವಿದೆ ಎಂದರು.
ಮನಸ್ಸು ಬದಲಾಯಿಸಿರುವೆ: ನೂತನ ಕಚೇರಿಗೆ ಸೋಮವಾರ ಭೇಟಿ ನೀಡುವ ಇಂಗಿತ ವ್ಯಕ್ತಪಡಿಸಿರುವ ಮೇಲ್ಮನೆ ಸದಸ್ಯೆ ವೀಣಾ ಅಚ್ಚಯ್ಯ ಅವರು, ಸದ್ಯದ ಪರಿಸ್ಥಿತಿಯಲ್ಲಿ ವ್ಯವಸ್ಥೆಗಾಗಿ ಮನಸ್ಸು ಬದಲಾಯಿಸಿಕೊಂಡಿರುವೆ ಎಂದು ‘ಶಕ್ತಿ’ಯೊಂದಿಗೆ ನಗು ಬೀರಿದರು. ಅಲ್ಲದೆ, ಆಡಳಿತಾತ್ಮಕ ಕೆಲಸಗಳಿಗೆ ಜಿ.ಪಂ. ಭವನದಲ್ಲಿ ಕಚೇರಿ ಕೆಲಸ ನಿರ್ವಹಣೆ ತಮಗೆ ಅವಶ್ಯಕವೆಂದು ನೆನಪಿಸಿಕೊಂಡರು.
ಅAತೆಯೇ ಇನ್ನೋರ್ವ ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಕೂಡ ನೂತನ ಕಚೇರಿಗೆ ಭೇಟಿ ನೀಡಿ ವ್ಯವಸ್ಥೆ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ದೈನಂದಿನ ಸಾರ್ವಜನಿಕ ಕೆಲಸಗಳನ್ನು ತಮ್ಮ ಹೊಸ ಕಚೇರಿಯಲ್ಲಿ ನಿರ್ವಹಿಸುವೆ ಎಂದು ಸ್ಪಷ್ಟಪಡಿಸಿದರು.
ಇನ್ನು ಯೋಚಿಸಿಲ್ಲ: ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಮಾತನಾಡಿ, ಜಿ.ಪಂ. ಭವನದಲ್ಲಿರುವ ತಮ್ಮ ನೂತನ ಕಚೇರಿಗೆ ತೆರಳುವ ಬಗ್ಗೆ ಇನ್ನೂ ಯೋಚಿಸಿಲ್ಲ ಎಂದು ‘ಶಕ್ತಿ’ಯೊಂದಿಗೆ ಪುನರುಚ್ಚರಿಸಿದರು.
ಇನ್ನೊಂದೆಡೆ ಈಗಾಗಲೇ ತಿಂಗಳುಗಳ ಹಿಂದೆ ಕೋಟೆ ಕಚೇರಿ ತೊರೆದಿರುವ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು, ತಾಲೂಕು ಪಂಚಾಯಿತಿ ಕಟ್ಟಡದಲ್ಲಿ ನಗರದ ಸುದರ್ಶನ ವೃತ್ತ ಬಳಿ ತಮ್ಮ ಕಚೇರಿ ಕೆಲಸ ನಿರ್ವಹಿಸುತ್ತಿದ್ದಾರೆ.