ಮಡಿಕೇರಿ, ನ. ೨: ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ವಾರ್ಷಿಕ ಮಹಾಸಭೆಯು ಇಂದು ಇಲ್ಲಿನ ವಾಣಿಜ್ಯೋದ್ಯಮಿಗಳ ಸಹಕಾರ ಸಂಘ ಸಭಾಂಗಣದಲ್ಲಿ ನಡೆಯಿತು.ಸಂಸ್ಥೆಯ ಅಧ್ಯಕ್ಷ ಬಿ.ಎನ್. ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಮೋಂತಿ ಗಣೇಶ್ ವರದಿ ವಾಚಿಸಿದರು. ಖಜಾಂಚಿ ರವಿ ಉತ್ತಪ್ಪ ಲೆಕ್ಕಪತ್ರ ಮಂಡಿಸಿದರು. ರಾಜ್ಯ ಸಮಿತಿಯ ಪದಾಧಿಕಾರಿ ಕೆ.ಬಿ. ಗಿರೀಶ್ ಗಣಪತಿ, ಉಪಾಧ್ಯಕ್ಷರು ಗಳಾದ ಎಂ.ಇ. ಹನೀಫ್, ಬಿ.ಆರ್. ನಾಗೇಂದ್ರ ಪ್ರಸಾದ್ ಉಪಸ್ಥಿತರಿದ್ದರು.
ನೂತನ ಆಡಳಿತ ಮಂಡಳಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಎಂ.ಬಿ. ದೇವಯ್ಯ, ಪ್ರಧಾನ ಕಾರ್ಯದರ್ಶಿ ಯಾಗಿ ನವೀನ್ ಅಂಬೆಕಲ್, ಉಪಾಧ್ಯಕ್ಷರು ಗಳಾಗಿ ಕೇಶವ ಕಾಮತ್ ಮತ್ತು .ಬಿ.ಆರ್. ನಾಗೇಂದ್ರ ಪ್ರಸಾದ್, ಖಜಾಂಚಿಯಾಗಿ ಎ.ಎನ್. ರವಿ ಉತ್ತಪ್ಪ, ಸಂಘಟನಾ ಕಾರ್ಯದರ್ಶಿ ಗಳಾಗಿ ಬಿ.ಆರ್. ಪ್ರಮೋದ್, ಪೊನ್ನಿಮಾಡ ಸುರೇಶ್ ಹಾಗೂ ಮೋಂತಿ ಗಣೇಶ್ ಆಯ್ಕೆಯಾದರು.