ಮಡಿಕೇರಿ, ನ. ೨: ವೀರಾಜಪೇಟೆಯ ಗಡಿಯಾರ ಕಂಬದ ಬಳಿಯಿರುವ ಗಣಪತಿ ದೇಗುಲ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಏರ್ಪಡಿಸಲಾಗಿದ್ದ ರಂಗೋಲಿ ಹಾಗೂ ಭಕ್ತಿ ಗೀತ ಗಾಯನ ಸ್ಪರ್ಧೆಯಲ್ಲಿ ವೀರಾಜಪೇಟೆಯ ಕಾವೇರಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ವಿಜೇತರಾಗಿದ್ದಾರೆ. ರಂಗೋಲಿ ಸ್ಪರ್ಧಾಯಲ್ಲಿ ರಿಧ್ಯಾ ಮುತ್ತಮ್ಮ ಕೆ.ಟಿ, ೯ನೇ ತರಗತಿ - ಪ್ರಥಮ ಸ್ಥಾನ ಹಾಗೂ ಬಿನಿತಾ.ಎ, ೧೦ನೇ ತರಗತಿ - ಮೂರನೇ ಸ್ಥಾನವನ್ನು ಪಡೆದಿರುತ್ತಾರೆ. ಭಕ್ತಿ ಗೀತೆ ಸ್ಪರ್ಧೆಯಲ್ಲಿ ವರ್ಷಿಣಿ ಬಿ.ಎಸ್ ಹಾಗೂ ಪ್ರಜ್ಞಾ ಕಾವೇರಮ್ಮ ಸಿ.ಡಿ ಇವರುಗಳು ಭಾಗವಹಿಸಿ ಪ್ರಶಸ್ತಿ ಪತ್ರ ಪಡೆದಿದ್ದಾರೆ.