ಮಡಿಕೇರಿ, ನ. 1: ಕರ್ನಾಟಕ ರಾಜ್ಯ ಸರಕಾರ ರಾಜ್ಯೋತ್ಸವದ ಸವಿನೆನಪಿಗಾಗಿ ರಾಜ್ಯದ ಕೆಲವು ಆಯ್ದ ಜಿಲ್ಲೆಗಳಿಗೆ ಸುವರ್ಣ ಕರ್ನಾಟಕ ಸಾಂಸ್ಕøತಿಕ ಭವನ ಎಂಬ ಸುಸಜ್ಜಿತ ಕಟ್ಟಡ ನಿರ್ಮಾಣದ ಯೋಜನೆಯನ್ನು ಪ್ರಕಟಿಸಿದ್ದುದು ಬಹುಶಃ ಮರೆತೇ ಹೋದಂತಾಗಿದೆ.2006ನೇ ಇಸವಿಯಲ್ಲಿ ರಾಜ್ಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಸಮ್ಮಿಶ್ರ ಸರಕಾರ ಅಧಿಕಾರದಲ್ಲಿದ್ದ ಸಂದರ್ಭ ಎಂ.ಪಿ. ಪ್ರಕಾಶ್ಉಪಮುಖ್ಯಮಂತ್ರಿಗಳಾಗಿದ್ದ ಆ ಸಂದರ್ಭ ಮಡಿಕೇರಿ, ಶಿವಮೊಗ್ಗ, ಉಡುಪಿಗೆ ಸುವರ್ಣ ಭವನ ಎಂಬ ಸಾಂಸ್ಕøತಿಕ ಕಟ್ಟಡಕ್ಕಾಗಿ ಈ ಯೋಜನೆಯನ್ನು ಪ್ರಕಟಿಸಿದ್ದರು. ಆದರೆ ಇದೀಗ ಸುಧೀರ್ಘ ಹದಿಮೂರು ವರ್ಷಗಳೇ ಕಳೆದರೂ ಈ ಯೋಜನೆ ಮಾತ್ರ ಇನ್ನೂ ಕಾರ್ಯಗತಗೊಂಡಿಲ್ಲ. ಕಾಮಗಾರಿ ಅರ್ಧದಲ್ಲೇ ನಿಂತಿದ್ದು, ಅನುದಾನದ ಕೊರತೆಯೂ ಎದುರಾಗಿದೆ. ಇದರಿಂದಾಗಿ ಇನ್ನೂ ಹಲವು ಸಮಯ ಈ ಭವನ ಮಡಿಕೇರಿಯಲ್ಲಿ ತಲೆಎತ್ತಿ ಲೋಕಾರ್ಪಣೆಗೊಳ್ಳುವದು ಸಂಶಯವೇ ಸರಿ.

ಹಿನ್ನೆಲೆ - ವಾಸ್ತವತೆ

2006ರಲ್ಲಿ ಸುವರ್ಣ ಕರ್ನಾಟಕ ಸಾಂಸ್ಕøತಿಕ ಸಮುಚ್ಚಯ ಭವನ ಯೋಜನೆ ಪ್ರಕಟಗೊಂಡಾಗ ಅದು ರೂ. 1.60 ಕೋಟಿ ವೆಚ್ಚದ್ದಾಗಿತ್ತು. ಆದರೆ ಇದಕ್ಕೆ ಆಡಳಿತಾತ್ಮಕ ಮಂಜೂರಾತಿ ದೊರೆತದ್ದು ಏಳು ವರ್ಷಗಳ ಬಳಿಕ 2013ರಲ್ಲಿ. ಈ ನಡುವೆ ಸರಕಾರದ ಈ ಕಟ್ಟಡ ನಿರ್ಮಾಣಕ್ಕೆ ಜಿಲ್ಲಾ ಕೇಂದ್ರವಾದ ಮಡಿಕೇರಿಯಲ್ಲಿ ಸೂಕ್ತ ಜಾಗದ ಸಮಸ್ಯೆ ಎದುರಾಗಿತ್ತು. ಹಲವು ವರ್ಷಗಳ ಕಾಲ ಜಾಗದ ಹುಡುಕಾಟವೇ ನಡೆದ ಬಳಿಕ ಇದಕ್ಕೆ ಅಂತಿಮವಾಗಿ ನಗರದ ಚೈನ್‍ಗೇಟ್ ಬಳಿಯ (ಹಳೆಯ ಸೌಧೆ ಡಿಪೋ) 80 ಸೆಂಟ್ ಜಾಗವನ್ನು ನಿಗದಿಪಡಿಸಲಾಗಿತ್ತು.

ಜಾಗ ಅಂತಿಮವಾಗುವ ವೇಳೆಗೆ ಯೋಜನಾ ಮೊತ್ತ ರೂ. 4 ಕೋಟಿಗೆ ಏರಿಕೆಯಾಗಿದ್ದು, 2013ರಲ್ಲಿ ಇದಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು. ಬಳಿಕ ನಿಯಮಾವಳಿ ಯಂತೆ ವಿವಿಧ ಪ್ರಕ್ರಿಯೆಗಳು ಪೂರ್ಣಗೊಂಡು ಆರಂಭಿಕವಾಗಿ ರೂ. 50 ಲಕ್ಷ ಬಳಿಕ ರೂ. 57 ಲಕ್ಷದಂತೆ 1.07 ಕೋಟಿ ಜಿಲ್ಲಾಡಳಿತದ ಮೂಲಕ ಲೋಕೋಪಯೋಗಿ ಇಲಾಖೆಗೆ ಬಿಡುಗಡೆ ಮಾಡಲಾಯಿತು. ಒಟ್ಟು ರೂ. 4 ಕೋಟಿ ವೆಚ್ಚದ ಯೋಜನೆ ಯಂತೆ ರೂ. 3.07 ಕೋಟಿ ಅನುದಾನ ಈ ತನಕ ಲಭ್ಯವಾಗಿದೆ. ಪ್ರಕ್ರಿಯೆಗಳ ಬಳಿಕ ಕಾಮಗಾರಿ ಪ್ರಾರಂಭಗೊಂಡಿದ್ದು, 2016-17ರ ಸಂದರ್ಭದಲ್ಲಿ. ಬಿಡುಗಡೆಯಾದ ಅನುದಾನದಲ್ಲಿ ಈ ಕಟ್ಟಡದ ಕಾಮಗಾರಿ ಒಂದಷ್ಟು ನಡೆದಿದೆ.

ಏನೇನು ಬರಲಿದೆ..?

ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಅಧೀನದಲ್ಲಿ ಈ ಸಮುಚ್ಚಯ ನಿರ್ಮಾಣವಾಗಬೇಕಿದೆ. ಇದರಲ್ಲಿ ಈ ಇಲಾಖೆಯ ಕಚೇರಿ ಸೇರಿದಂತೆ ಕನ್ನಡ ಸಂಸ್ಕøತಿ ಇಲಾಖೆಯಡಿ ಬರುವ ಕರ್ನಾಟಕ ಕೊಡವ ಅಕಾಡೆಮಿ, ಅರೆಭಾಷಾ ಅಕಾಡೆಮಿಗಳ

(ಮೊದಲ ಪುಟದಿಂದ) ಕಚೇರಿ, Àುಸಜ್ಜಿತವಾದ ಸಭಾಂಗಣ, ಒಂದು ಗ್ರಂಥಾಲಯ, ಮ್ಯೂಸಿಯಂ ನಿರ್ಮಾಣದ ಯೋಜನೆ ಇದರಲ್ಲಿ ಒಳಗೊಂಡಿದೆ.

ರೂ. 4 ಕೋಟಿಯ ಉದ್ದೇಶಿತ ಯೋಜನೆಯಂತೆ ಈತನಕ ವಿವಿಧ ಹಂತಗಳಲ್ಲಿ ದೊರೆತಿರುವ ರೂ. 3.07 ಕೋಟಿ ಹಣದಲ್ಲಿ ನೆಲ ಅಂತಸ್ತು, ಒಂದನೇ ಅಂತಸ್ತು ಸೇರಿ ಯೋಜನೆಯಂತೆ ಹಲವು ಕೆಲಸ ಕಾರ್ಯಗಳನ್ನು ನಡೆಸಲಾಗಿದೆ. ಆದರೆ ಬಿಡುಗಡೆಯಾದ ಹಣ ಮುಗಿದ ಬಳಿಕ ಮಗದೊಮ್ಮೆ ಈ ಕಾಮಗಾರಿ ಸ್ಥಗಿತಗೊಂಡು ಅರ್ಧದಲ್ಲಿ ನಿಂತಿದೆ.