ಮಡಿಕೇರಿ, ನ. ೨: ಮಾಜಿ ಪ್ರಧಾನಿ ಇಂದಿರಾಗಾAಧಿ ಅವರ ೩೫ನೇ ಸಂಸ್ಮರಣೆ ಹಾಗೂ ಮಾಜಿ ಉಪಪ್ರಧಾನಿ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ೧೪೪ನೇ ಜನ್ಮ ದಿನ, ಹುತಾತ್ಮ ಸ್ವಾತಂತ್ರ÷್ಯಯೋಧ ಗುಡ್ಡೆಮನೆ ಅಪ್ಪಯ್ಯಗೌಡರ ಪುಣ್ಯಸ್ಮರಣೆ ಕೊಡಗು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು.

ಈ ಸಂದರ್ಭ ಕೆಪಿಸಿಸಿ ಹಿರಿಯ ಸದಸ್ಯ ಟಿ.ಪಿ. ರಮೇಶ್ ಮಾತನಾಡಿ, ದೇಶದ ಪ್ರಧಾನಿಯಾದ ಇಂದಿರಾಗಾAಧಿಯವರು ತಮ್ಮ ದಿಟ್ಟ ನಿರ್ಧಾರಗಳ ಮೂಲಕ ದೇಶದ ಪ್ರಗತಿ ಸಾಧಿಸಿರುವದನ್ನು ವಿವರಿಸಿದರು, ಕೊಡಗು ಜಿಲ್ಲೆಗೆ ಇಂದಿರಾಗಾAಧಿಯವರು ನೀಡಿದ ಭೇಟಿಯನ್ನು ಸ್ಮರಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್, ದೇಶದ ಕೃಷಿ ಕ್ಷೇತ್ರ, ಶಿಕ್ಷಣ ಕ್ಷೇತ್ರ ಹಾಗೂ ರಕ್ಷಣಾ ಕ್ಷೇತ್ರಕ್ಕೆ ಇಂದಿರಾಗಾAಧಿಯವರ ಕೊಡುಗೆಗಳು ಮತ್ತು ಬಡತನ ನಿವಾರಣೆಗೆ ಗರೀಬಿ ಹಟಾವೋ ಯೋಜನೆಗಳನ್ನು ಜಾರಿಗೆ ತಂದ ಧೀಮಂತ ನಾಯಕಿ ಎಂದು ಬಣ್ಣಿಸಿದರು.

ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ಪಿ. ಸುರೇಶ್, ಕಿಸಾನ್ ಘಟಕದ ಅಧ್ಯಕ್ಷ ನೆರವಂಡ ಉಮೇಶ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕ ತನ್ನೀರ ಮೈನಾ, ಅರೆಭಾಷೆ ಅಕಾಡೆಮಿಯ ಮಾಜಿ ಅಧ್ಯಕ್ಷ ಕೊಲ್ಯದ ಗಿರೀಶ್, ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ರಜಾಕ್, ಸಾಮಾಜಿಕ ಜಾಲತಾಣದ ಮುಖ್ಯಸ್ಥ ಹೊಸೂರು ಸೂರಜ್, ಕರಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲಚಂದ್ರ ನಾಯರ್, ಮಾಜಿ ನಗರಸಭಾ ಸದಸ್ಯರಾದ ಪ್ರಕಾಶ್ ಆಚಾರ್ಯ, ಉದಯಕುಮಾರ್, ನಗರ ಯುವ ಕಾಂಗ್ರೆಸ್ ಅಧ್ಯಕ್ಷರಾದ ಸದಾ ಮುದ್ದಪ್ಪ, ಪ್ರೇಮ ಕೃಷ್ಣಪ್ಪ, ಮುಮ್ತಾಜ್ ಬೇಗಂ, ಕಲೀಲ್ ಭಾಷಾ, ಕರಿಕೆಯ ಪುರುಷೋತ್ತಮ್, ಚನ್ನಪ್ಪ ಚಂಬು, ರಾಣಿ, ಉಷಾ ಸೇರಿದಂತೆ ಪಕ್ಷದ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.

ಇಂದಿರಾಗಾAಧಿ ಸ್ಮರಣೆ ಕಾರ್ಯಕ್ರಮ

ಸೋಮವಾರಪೇಟೆ : ಮಾಜೀ ಪ್ರಧಾನಿ ದಿ. ಇಂದಿರಾಗಾAಧಿ ಅವರ ೩೪ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ಆಚರಿಸಲಾಯಿತು.

ಇಂದಿರಾಗಾAಧಿ ಅಭಿಮಾನಿಗಳ ಸಂಘದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಸಂಘದ ಪದಾಧಿಕಾರಿಗಳು ಇಂದಿರಾಗಾAಧಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜು, ಪ್ರಧಾನ ಕಾರ್ಯದರ್ಶಿ ಹೆಚ್.ಬಿ. ರಾಜಪ್ಪ, ಸಲಹೆಗಾರ ಪಳನಿಸ್ವಾಮಿ, ಹೆಚ್.ಓ. ಪ್ರಕಾಶ್, ಕಾಂಗ್ರೆಸ್ ಪಕ್ಷದ ಪದಾಧಿಕಾರಿ ಮೋಹನ್, ಸಂಘದ ಸದಸ್ಯರಾದ ಚನ್ನಯ್ಯ, ರಾಜು, ಡಿ.ಜೆ. ಅಜಯ್, ವಾಸು, ಮಂಜು, ಗುಣಶೇಖರ್ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.