ಕಣಿವೆ, ನ. ೨: ಜಿಲ್ಲೆಯ ಪ್ರಮುಖ ಪ್ರವಾಸಿ ಧಾಮ ದುಬಾರೆಯ ಅರಣ್ಯದಲ್ಲಿ ಹುಲಿಗಳ ದರ್ಶನ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಇಲಾಖೆಯ ಮಾಹಿತಿಯ ಪ್ರಕಾರ ಎಂಟಕ್ಕು ಹೆಚ್ಚು ಹುಲಿಗಳು ಇವೆ ಎನ್ನಲಾಗುತ್ತಿದೆ. ಹುಲಿಗಳ ಇರುವಿಕೆಯನ್ನು ದುಬಾರೆಯ ಮಾವುತರು ಖಚಿತಪಡಿಸಿದ್ದಾರೆ. ಹಾಗೆಯೇ ಚಿಕ್ಲಿಹೊಳೆ ಜಲಾಶಯಕ್ಕೆ ತೆರಳುವಾಗ ಸಿಗುವ ಅರಣ್ಯದಲ್ಲೂ ಇದೇ ಹುಲಿಗಳು ಸಂಚಾರ ನಡೆಸುತ್ತಿವೆ. ಈಗಾಗಲೇ ದುಬಾರೆಯ ಅರಣ್ಯಾಧಿಕಾರಿಗಳಿಗೆ ಈ ಹುಲಿಗಳ ದರ್ಶನ ಆಗಿದೆ. ಆದಾಗ್ಯೂ ಅರಣ್ಯದಂಚಿನ ಗ್ರಾಮಗಳ ನಿವಾಸಿಗಳು ಮತ್ತು ಗಿರಿಜನ ನಿವಾಸಿಗಳು ಎಚ್ಚರದಿಂದಿರಬೇಕು ಎಂದು ಜಿಲ್ಲಾಡಳಿತ ನಿರ್ದೇಶನ ನೀಡಿದೆ.