ಸಿದ್ದಾಪುರ, ನ. ೨: ಈದ್ ಮಿಲಾದ್‌ಅನ್ನು ಶಾಂತಿಯುತವಾಗಿ ಆಚರಣೆ ಮಾಡಬೇಕೆಂದು ಮಡಿಕೇರಿ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಕರೆ ನೀಡಿದರು. ಸಿದ್ದಾಪುರದ ಪೊಲೀಸ್ ಠಾಣೆಯಲ್ಲಿ ಏರ್ಪಡಿಸಲಾಗಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಈದ್ ಮಿಲಾದ್ ಆಚರಣೆ ಮಾಡುವ ಮಸೀದಿಗಳು ಪೊಲೀಸ್ ಇಲಾಖೆಯಿಂದ ಧ್ವನಿವರ್ಧಕಕ್ಕೆ ಹಾಗೂ ಕಾರ್ಯಕ್ರಮಗಳಿಗೆ ಅನುಮತಿಗಾಗಿ ಸಿದ್ದಾಪುರದ ಠಾಣೆ ಮುಖಾಂತರ ದಾಖಲೆಗಳನ್ನು ಲಗತ್ತಿಸಿ ನೀಡಿದಲ್ಲಿ ಶೀಘ್ರ ಅನುಮತಿ ನೀಡುವದಾಗಿ ತಿಳಿಸಿದರು.

ಸಭೆಯಲ್ಲಿ ಸಿದ್ದಾಪುರ ಠಾಣಾ ವ್ಯಾಪ್ತಿಗೆ ಒಳಪಡುವ ಎಲ್ಲಾ ಗ್ರಾಮಗಳ ಮಸೀದಿಯ ಪದಾಧಿಕಾರಿಗಳು ಹಾಜರಿದ್ದು, ಮಾಹಿತಿಗಳನ್ನು ಪಡೆದುಕೊಂಡರು. ಸಿದ್ದಾಪುರ ಠಾಣೆಯ ಸಹಾಯಕ ಠಾಣಾಧಿಕಾರಿಗಳಾದ ಗಣಪತಿ ಹಾಗೂ ಜಾನ್ ಪೆರೆರಾ ಇದ್ದರು.