ಮಡಿಕೇರಿ, ನ. ೨: ಜಿಲ್ಲಾ ಕೇಂದ್ರ ಗ್ರಂಥಾಲಯ ವ್ಯಾಪ್ತಿಯಲ್ಲಿನ ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ಮೇಲ್ವೀಚಾರಕರ ಖಾಲಿ ಇರುವ ಸ್ಥಾನಗಳಿಗೆ ಮಾಹೆಯಾನ ರೂ. ೭ ಸಾವಿರ ಗೌರವ ಸಂಭಾವನೆ ಆಧಾರದ ಮೇಲೆ ನಿಗದಿಪಡಿಸಿದ ನಮೂನೆಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ.

ಖಾಲಿ ಇರುವ ಹುದ್ದೆಗಳಿಗೆ ಸಂಬAಧಪಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು. ಅರ್ಜಿಗಳನ್ನು ಸಂಬAಧಿಸಿದ ಗ್ರಾಮ ಪಂಚಾಯಿತಿಗಳಿAದ ಪಡೆಯುವದು.

ಖಾಲಿ ಇರುವ ಹುದ್ದೆಗಳ ಮೀಸಲಾತಿ ವಿವರ: ವೀರಾಜಪೇಟೆ ತಾಲೂಕಿನ ಕದನೂರು ಗ್ರಾ.ಪಂ. ಗ್ರಂಥಾಲಯ ಸಾ.ಅ(ಮ.ಅ) ಮತ್ತು ಕಾನೂರು ಗ್ರಾ.ಪಂ ಗ್ರಂಥಾಲಯ ಸಾ.ಅ (ಕ.ಮಾ.ಅ).

ಮಡಿಕೇರಿ ತಾಲೂಕಿನ ಗ್ರಾ.ಪಂ. ಗ್ರಂಥಾಲಯ ಭಾಗಮಂಡಲ ಪ್ರ.ವ. ೩ಬಿ(ಮ.ಅ) ಹಾಗೂ ಸೋಮವಾರಪೇಟೆ ತಾಲೂಕಿನ ಗ್ರಾ.ಪಂ. ಗ್ರಂಥಾಲಯ ಶನಿವಾರಸಂತೆ ಸಾ.ಅ (ಮ.ಅ) ಮತ್ತು ಗ್ರಾ.ಪಂ. ಗ್ರಂಥಾಲಯ ದೊಡ್ಡಮಳ್ತೆ ಪರಿಶಿಷ್ಟ ಜಾತಿ (ಮ.ಅ).

ಅರ್ಜಿ ಸಲ್ಲಿಸಲು ತಾ. ೨೮ ಕಡೆ ದಿನವಾಗಿದೆ. ವಿದ್ಯಾರ್ಹತೆ ಹಾಗೂ ಇತರೆ ದಾಖಲೆಗಳನ್ನು ದೃಢೀಕರಿಸಿ, ಪ್ರತಿಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ ಸಂಬAಧಪಟ್ಟ ಗ್ರಾಮ ಪಂಚಾಯಿತಿ ಕಚೇರಿಗೆ ಸಲ್ಲಿಸುವದು.

ಹೆಚ್ಚಿನ ವಿವರಗಳಿಗೆ ಮಡಿಕೇರಿ ಮುಖ್ಯ ಗ್ರಂಥಾಲಯಾಧಿಕಾರಿಯವರ ಕಚೇರಿ, ಜಿಲ್ಲಾ ಕೇಂದ್ರ ಗ್ರಂಥಾಲಯ, ದೂರವಾಣಿ ಸಂಖ್ಯೆ ೦೮೨೭೨-೨೨೫೪೬೩ ಅಥವಾ ಈ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು.