ಗೋಣಿಕೊಪ್ಪಲು. ನ. ೨: ಪೊನ್ನಂಪೇಟೆ ಶಿಶು ಅಭಿವೃದ್ಧಿ ಯೋಜನಾ ಕಚೇರಿ ಸಭಾಂಗಣದಲ್ಲಿ ತಾಲೂಕು ಸ್ತಿçÃಶಕ್ತಿಯ ಬ್ಲಾಕ್ ಸೊಸೈಟಿಯ ಮಹಾಸಭೆಯು ನಡೆಯಿತು. ನೂತನ ಸಾಲಿನ ಒಕ್ಕೂಟದ ಅಧ್ಯಕ್ಷರಾಗಿ ತಿತಿಮತಿಯ ಎಂ.ಎಸ್. ರಜನಿ ಇವರನ್ನು ಸರ್ವಾನುಮತದಿಂದ ಪೊನ್ನಂಪೇಟೆ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಸೀತಾಲಕ್ಷಿö್ಮ ಸಮ್ಮುಖದಲ್ಲಿ ನಡೆದ ಮಹಾಸಭೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಒಕ್ಕೂಟದ ಉಪಾಧ್ಯಕ್ಷರಾಗಿ ದೇವಯಾನಿ, ಕಾರ್ಯದರ್ಶಿ ರತ್ನ, ಖಜಾಂಚಿ ಪುಷ್ಪವಲ್ಲಿ ಆಯ್ಕೆಗೊಂಡರೆ ನಿರ್ದೇಶಕರಾಗಿ ಸುಜಾತ, ಲೀಲಾವತಿ, ಲಕ್ಷಿö್ಮ, ಹಾಜೀರ, ಯಶೋಧ ಹಾಗೂ ಮೀನ ಅವರನ್ನು ನೇಮಕ ಮಾಡಲಾಯಿತು.
ತಾಲೂಕು ಸ್ತಿçÃಶಕ್ತಿಯ ಬ್ಲಾಕ್ ಒಕ್ಕೂಟದ ಅಧ್ಯಕ್ಷೆ ಎಂ.ಎಸ್. ರಜನಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ತಾಲೂಕು ಮಟ್ಟದಲ್ಲಿ ಒಕ್ಕೂಟವು ಉತ್ತಮ ಕೆಲಸ ನಿರ್ವಹಿಸುತ್ತಿದೆ. ಸರ್ಕಾರದ ಯೋಜನೆಗಳು ಜನರಿಗೆ ತಲಪಿಸುವಲ್ಲಿ ಒಕ್ಕೂಟ ಮತ್ತಷ್ಟು ಪ್ರಯತ್ನ ನಡೆಸಬೇಕು. ಹಲವು ಕಾರ್ಯಕ್ರಮಗಳು ಮಹಿಳೆಯರಿಗಾಗಿ ಆಯೋಜನೆಯಾಗಬೇಕು ಎಂದು ತಿಳಿಸಿದರು. ಕಾರ್ಯದರ್ಶಿ ರತ್ನ ಸ್ವಾಗತಿಸಿ, ಪುಷ್ಪವಲ್ಲಿ ವಂದಿಸಿದರು.