ಮಡಿಕೇರಿ, ನ. ೨: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಮಡಿಕೇರಿ ಘಟಕ, ಪುತ್ತೂರು ವಿಭಾಗ, ಕೊಡಗು ಜಿಲ್ಲೆ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಕಲಾ ಮತ್ತು ಸಾಂಸ್ಕೃತಿಕ ಸಂಘ, ಬೆಂಗಳೂರು ಇದರ ಅಡಿಯಲ್ಲಿ ಕೊಡಗು ಜಿಲ್ಲಾ ಶಾಖೆಯ ಜಿಲ್ಲಾಧ್ಯಕ್ಷ ಪಿ.ಎಸ್. ವೈಲೇಶ್ ಅವರನ್ನು ಆಯ್ಕೆ ಮಾಡಲಾಗಿದೆ. ಶಾಖೆಯ ಜಿಲ್ಲೆಯಲ್ಲಿರುವ ವಿವಿಧ ಇಲಾಖೆಯ ಸರಕಾರಿ ಅಧಿಕಾರಿಗಳು, ನೌಕರರಲ್ಲಿರುವ ಮತ್ತು ಅವರ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳನ್ನು ಸ್ವತಂತ್ರವಾಗಿ ಹಮ್ಮಿಕೊಳ್ಳುವದರೊಂದಿಗೆ ದೇಶದ, ನಾಡಿನ, ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆಯನ್ನು ರಕ್ಷಿಸಿ, ಪ್ರೋತ್ಸಾಹಿಸಿ, ಬೆಳೆಸಲು ಯತ್ನಿಸುವಂತೆ ರಾಜ್ಯಾಧ್ಯಕ್ಷ ಅಂಬಣ್ಣ ಜಿ. ಮಹಾಗಾಂವಕರ್ ತಿಳಿಸಿದ್ದಾರೆ.