ಮಡಿಕೇರಿ, ನ. 1: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರ ನಿರ್ದೇಶನದಂತೆ ಕೊಡಗು ಜಿಲ್ಲೆಯ 6 ಬ್ಲಾಕ್‍ಗಳ ಅಧ್ಯಕ್ಷರುಗಳನ್ನು ಮುಂದುವರಿಸುವದು ಅಥವಾ ಬದಲಾಯಿಸುವದರ ಪ್ರಕ್ರಿಯೆಗೆ ಸಂಬಂಧಿಸಿದಂತೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ವೀಕ್ಷಕ ಟಿ.ಎಂ. ಶಾಹಿದ್ ಹಾಗೂ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ವೀಕ್ಷಕ ವೆಂಕಪ್ಪ ಗೌಡ ನೇತೃತ್ವದಲ್ಲಿ ಕಳೆದ ಒಂದು ವಾರಗಳ ಕಾಲ ಜಿಲ್ಲೆಯ ವಿವಿಧೆಡೆ ಸಭೆ ನಡೆದಿದ್ದು, ಹಲವಾರು ಮಂದಿ ಅರ್ಜಿ ಸಲ್ಲಿಸಿದ್ದಾರೆ.

ಬ್ಲಾಕ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ವಿವರ ಹೀಗಿದೆ; ವೀರಾಜಪೇಟೆ ಬ್ಲಾಕ್ ಆಕಾಂಕ್ಷಿ ಬಿ. ಬಿದ್ದಪ್ಪ, ಬೆಲ್ಲು ಬೋಪಯ್ಯ, ಎಂ.ವೈ ಆಲಿ, ರಂಜಿ ಪೂಣಚ್ಚ, ಹಂಸ ಹುಂಡಿ, ಎರ್ಥಂಡ ಮುಸ್ತಾಫ, ಪಿ.ಎ.ಹನೀಫ್, ಲಿಯಾಕತ್ ಅಲಿ, ಜಾನ್ಸನ್, ಆತಿಫ್ ಮನ್ನಾ, ಧ್ರುವ ಕುಮಾರ್.

ಸೋಮವಾರಪೇಟೆ ಬ್ಲಾಕ್: ಬಿ.ಬಿ. ಸತೀಶ್, ಅನಂತ್‍ಕುಮಾರ್, ಟಿ.ಈ. ಸುರೇಶ್, ಆದಂ, ಬಿ.ಈ. ಜಯೆಂದ್ರ, ಬಿ.ಎನ್. ಬಸವರಾಜ್.

ಕುಶಾಲನಗರ ಬ್ಲಾಕ್: ಹೆಚ್.ಎಸ್. ಮಂಜುನಾಥ್ ಹೆಬ್ಬಾಲೆ.

ಮಡಿಕೇರಿ ಬ್ಲಾಕ್: ಹಂಸ ಕೊಟ್ಟಮುಡಿ, ಅಬ್ದುಲ್ ರಜಾಕ್.

ಪೆÇನ್ನಂಪೇಟೆ ಬ್ಲಾಕ್: ಮಿದೇರೀರ ನವೀನ್, ಕೆ.ಯು. ಬೋಪಣ್ಣ, ಟಾಟು ಮೊಣ್ಣಪ್ಪ, ಸಿ.ಎನ್. ಸೋಮಣ್ಣ, ವಿಷ್ಣು, ಕೆ.ಎಂ. ಬಾಲಕೃಷ್ಣ, ಪ್ರಸನ್ನ, ಮತ್ರಂಡ ದಿಲ್ಲು.

ನಾಪೆÇೀಕ್ಲು ಬ್ಲಾಕ್: ಸುರೇಶ ಪೇರುಮಂಡ, ಕೆ.ಯು. ಹ್ಯಾರಿಸ್, ಸೂರಜ್ ಹೊಸೂರು, ಬಾಲಚಂದ್ರ ನಾಯರ್, ಸುನಿಲ್ ಪತ್ರಾವೋ, ಎಂ.ಪಿ. ಕುಶಾಲಪ್ಪ, ಕೆ.ಎ. ಇಸ್ಮಾಯಿಲ್, ಕೊಲ್ಯದ ಗಿರೀಶ್, ಪಿ.ಎಲ್. ಸುರೇಶ್, ಪುರುಷೋತ್ತಮ ಗೌಡ, ಬಂಗಾರ, ಕೋಡ-ಬಂಗಾರ.

ಇವರುಗಳು ಆಕಾಂಕ್ಷಿಗಳಾಗಿ ತಮ್ಮ ಅಭಿಪ್ರಾಯವನ್ನು ಮೌಖಿಕವಾಗಿ ವ್ಯಕ್ತಪಡಿಸಿ ಲಿಖಿತವಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಕೆಪಿಸಿಸಿ ವೀಕ್ಷಕರು ತಿಳಿಸಿದ್ದಾರೆ.

ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಕೆ.ಕೆ. ಮಂಜುನಾಥ್‍ಕುಮಾರ್, ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಮಾಜಿ ಎಂಎಲ್‍ಸಿ ಸಿ.ಎಸ್. ಅರುಣ್ ಮಾಚಯ್ಯ, ಟಿ.ಪಿ. ರಮೇಶ್, ವಿ.ಪಿ. ಶಶಿಧರ್, ಕೆ.ಎಂ. ಲೋಕೇಶ್, ಅಪ್ರು ರವೀಂದ್ರ, ಜಿಲ್ಲಾ ಕಾಂಗ್ರೆಸ್‍ನ ವಿವಿಧ ಮುಂಚೂಣಿ ಘಟಕಗಳ ಅಧ್ಯಕ್ಷರು, ಹಿರಿಯ ಮುಖಂಡರು, ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ಹಾಜರಿದ್ದರು.