ಗೋಣಿಕೊಪ್ಪಲು, ನ.೨: ಪೊನ್ನಂಪೇಟೆ ಸಂತ ಅಂತೋಣಿ ಪ್ರೌಢಶಾಲಾ ತಂಡ ೨೦೧೯-೨೦ ನೇ ಸಾಲಿನ ೧೭ ವಯೋಮಿತಿಗೆ ಒಳಪಟ್ಟ, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಜರುಗಿದ ರಾಜ್ಯ ಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಗೆದ್ದು ರಾಷ್ಟçಮಟ್ಟಕ್ಕೆ ಆಯ್ಕೆಯಾಗಿದ್ದು, ಇಂದು ಪೊನ್ನಂಪೇಟೆ ಪಟ್ಟಣದಲ್ಲಿ ಜಯಘೋಷದೊಂದಿಗೆ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿ ಸಂಭ್ರಮಿಸಿದರು.

ಇತ್ತೀಚೆಗೆ ಮಡಿಕೇರಿಯಲ್ಲಿ ಮುಗಿದ ರಾಜ್ಯಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಪೊನ್ನಂಪೇಟೆ ಸಂತ ಅಂತೋಣಿ ಶಾಲೆಯು ಮೈಸೂರು ವಿಭಾಗ ಮಟ್ಟದ ತಂಡವಾಗಿ ವಿರೋಚಿತ ಪ್ರದರ್ಶನ ನೀಡಿದ್ದು, ಕೊಡಗಿನ ಅತಿಥೇಯ ತಂಡವಾದ ಕೂಡಿಗೆ ಕ್ರೀಡಾಶಾಲೆಯನ್ನು ೨-೧ ಅಂತರದಿAದ ಫೈನಲ್‌ನಲ್ಲಿ ಸೋಲಿಸಿ ರಾಷ್ಟçಮಟ್ಟಕ್ಕೆ ಆರ್ಹತೆ ಪಡೆಯಿತು.

ಪೊನ್ನಂಪೇಟೆ ಸಂತ ಅಂತೋಣಿ ಶಾಲೆಯ ಮುಖ್ಯಸ್ಥರಾದ ರೆವರೆಂಡ್ ಫಾದರ್ ಡೇವಿಡ್ ಸಗಾಯರಾಜ್ ಮಕ್ಕಳ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ರಾಷ್ಟçಮಟ್ಟದ ಹಾಕಿ ಪಂದ್ಯಾವಳಿಯು ಚಂಡಿಗಢದಲ್ಲಿ ಜರುಗಲಿದ್ದು, ಉತ್ತಮ ಸಾಧನೆಗಾಗಿ ಕ್ರೀಡಾಪಟುಗಳಿಗೆ ಮತ್ತಷ್ಟು ಪೂರಕ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.

ಕ್ರೀಡಾಜಿಲ್ಲೆ ಕೊಡಗಿಗೆ ಹೆಮ್ಮೆ ತರುವ ಸಾಧನೆ ಇದಾಗಿದ್ದು, ಇಂದು ಪೊನ್ನಂಪೇಟೆ ಮುಖ್ಯರಸ್ತೆಯಲ್ಲಿ ಮೆರವಣಿಗೆ ನಡೆಸುವ ಮೂಲಕ ವಿದ್ಯಾರ್ಥಿಗಳ ಸಾಧನೆಯನ್ನು ಸಾರ್ವಜನಿಕರಿಗೆ ತಿಳಿಯಪಡಿಸುವ ಸಲುವಾಗಿ ಎಲ್ಲ ವಿಭಾಗದಲ್ಲಿಯೂ ಗೆದ್ದ ಟ್ರೋಫಿಯೊಂದಿಗೆ ವಿಜಯೋತ್ಸವದಲ್ಲಿ ಪ್ರದರ್ಶನ ಮಾಡಲಾಯಿತು ಎಂದರು.

ಮೆರವಣಿಗೆಯಲ್ಲಿ ಸಂತ ಅಂತೋಣಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದು ಶಾಲಾ ಆವರಣದಿಂದ, ಶ್ರೀ ರಾಮಕೃಷ್ಣ ಶಾರದಾಶ್ರಮ ಮಾರ್ಗವಾಗಿ, ಬಸ್ ನಿಲ್ದಾಣ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ವರೆಗೆ ಸಾಗುವ ಮೂಲಕ ಕ್ರೀಡಾಪ್ರೇಮವನ್ನು ಪಸರಿಸಿದರು. ರಾಷ್ಟçಮಟ್ಟದ ಹಾಕಿ ಪಂದ್ಯಾವಳಿಗೆ ಆಯ್ಕೆಯಾದ ಬಗ್ಗೆ ಬ್ಯಾನರ್‌ನೊಂದಿಗೆ ಹಾಗೂ ಎರಡು ತೆರೆದ ಜೀಪಿನಲ್ಲಿ ಹಾಕಿ ಪಟುಗಳು ವಿಜಯಘೋಷ ಹಾಕುತ್ತಾ ಮೆರವಣಿಗೆಯಲ್ಲಿ ಸಾಗಿದರು.

ನಾಯಕ ಗೌರವ್ ಸಿ.ಎಂ.ಉತ್ತಮ ಆಟಗಾರ

ಮೈಸೂರು ವಿಭಾಗ ಹಾಕಿ ತಂಡದ ನಾಯಕ, ಅಂತೋಣಿ ಶಾಲೆಯ ೧೦ನೇ ತರಗತಿ ವಿದ್ಯಾರ್ಥಿ ಗೌರವ್ ಸಿ.ಎಂ. ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಉತ್ತಮ ಆಟಗಾರ ಪ್ರಶಸ್ತಿಗೆ ಭಾಜನರಾದರು.

ತರುಣ್ ಕೆ.ಕೆ.ಉತ್ತಮ ಗೋಲಿ ಪ್ರಶಸ್ತಿ ಹಾಗೂ ಉಪ ನಾಯಕ ಬಿಪಿನ್ ಬಿ.ಆರ್. ಅತ್ಯಧಿಕ ಗೋಲು( ಒಟ್ಟು ೧೨ ಗೋಲು) ಗಳಿಸಿದ ಕೀರ್ತಿಗೆ ಪಾತ್ರರಾದರು. ವಿಭಾಗ ಮಟ್ಟದಲ್ಲಿ ಸಂತ ಅಂತೋಣಿ ಶಾಲಾ ವಿದ್ಯಾರ್ಥಿಗಳು ಮೈಸೂರು ರಾಮಕೃಷ್ಣ ವಿದ್ಯಾಲಯದ ವಿರುದ್ಧ ೮-೧ ಗೋಲುಗಳ ಅಂತರದಿAದ ಗೆದ್ದು ರಾಜ್ಯ ಮಟ್ಟಕ್ಕೆ ಅರ್ಹತೆ ಪಡೆದಿದ್ದರು.

ರಾಷ್ಟç ಮಟ್ಟಕ್ಕೆ ಇದೇ ಪ್ರಥಮ ಬಾರಿಗೆ ಮೈಸೂರು ವಿಭಾಗ ಮಟ್ಟದÀ ತಂಡದಲ್ಲಿ ಸಂತ ಅಂತೋಣಿಯ ೧೪ ಹಾಕಿ ಪಟುಗಳು ಭಾಗವಹಿಸಿದ್ದು, ಮಡಿಕೇರಿಯಲ್ಲಿ ಜರುಗಿದ ಹಾಕಿ ಪಂದ್ಯಾವಳಿಯಲ್ಲಿ ಎಲ್ಲ ೫ ಪಂದ್ಯಗಳಲ್ಲಿಯೂ ಜಯಗಳಿಸಿ ಸಾಧನೆ ಮಾಡಿದ್ದು ವಿಶೇಷ.

ಬೆಂಗಳೂರು ತಂಡದ ವಿರುದ್ಧ ೭-೧ ಗೋಲು ಅಂತರದ ಜಯ, ಬೆಳಗಾಂ ವಿರುದ್ಧ ೧೪-೦ ಅಂತರದ ಗೋಲುಗಳಿಂದ ಜಯ, ಬಳ್ಳಾರಿ ತಂಡದ ವಿರುದ್ಧ ೧೨-೨ ಅಂತರದಿAದ ಜಯ, ಸೆಮಿಫೈನಲ್ ನಲ್ಲಿ ಬೆಂಗಳೂರು ಇಂಡಿಯನ್ ಪ್ರೌಢ ಶಾಲೆ ವಿರುದ್ಧ ೬-೨ ಅಂತರದ ಜಯ ಹಾಗೂ ಫೈನಲ್ಸ್ನಲ್ಲಿ ಕೂಡಿಗೆ ಕ್ರೀಡಾ ಶಾಲೆ ಎದುರು ೨-೧ ಅಂತರದಿAದ ಗೆದ್ದು ಸಾಧನೆ ಮಾಡಿದೆ.

ಮೈಸೂರು ವಿಭಾಗ ಮಟ್ಟದ ತಂಡದಲ್ಲಿ ಸಂತ ಅಂತೋಣಿ ಪ್ರೌಢಶಾಲೆಯ ವಚನ್, ವಚನ್ ಅಯ್ಯಪ್ಪ ಎಂ.ಎA., ನಂಜುAಡ ಎಂ.ಸಿ., ಶಶಾಂಕ್ ಕೆ.ಆರ್. ತರುಣ್ ಗಣಪತಿ ಕೆ.ಕೆ., ಮೋಕ್ಷಿತ್ ಬಿ.ಯು., ಹರ್ಷಿತ್ ಕುಮಾರ್ ಎಂ, ಆರ್ಯನ್ ಉತ್ತಪ್ಪ ಎಂ.ಟಿ., ನಂಜಪ್ಪ ಎನ್.ಬಿ. ಹಾಗೂ ನಾಯಕನಾಗಿ ಗೌರವ್, ಉಪ ನಾಯಕನಾಗಿ ಬಿಪಿನ್ ತಂಡವು ಅದ್ವಿತೀಯ ಸಾಧನೆ ಮಾಡಿದೆ. ಸಂತ ಅಂತೋಣಿ ಶಾಲೆಯ ಎಸ್.ವಿಕ್ಟರ್ ದೈಹಿಕ ಶಿಕ್ಷಕರಾಗಿದ್ದಾರೆ. ಇಂದು ಪೊನ್ನಂಪೇಟೆಯಲ್ಲಿ ಜರುಗಿದ ವಿಜಯೋತ್ಸವದಲ್ಲಿ ಶಾಲಾ ಶಿಕ್ಷಕ ವೃಂದದವರೂ ಪಾಲ್ಗೊಂಡು ಸಂಭ್ರಮಿಸಿದರು.

ಪೊನ್ನAಪೇಟೆ ಪೊಲೀಸ್ ಉಪನಿರೀಕ್ಷಕ ಕುಮಾರ್ ಮತ್ತು ಸಿಬ್ಬಂದಿ ಹಾಕಿ ವಿಜಯೋತ್ಸವ ಸಂದರ್ಭ ಭದ್ರತೆ ಒದಗಿಸಿದ್ದರು.

-ವರದಿ: ಟಿ.ಎಲ್.ಶ್ರೀನಿವಾಸ್