ಮಡಿಕೇರಿ, ನ. ೨: ಹಾಕತ್ತೂರಿನಲ್ಲಿರುವ ಮಾಜಿ ಸಚಿವ ಯಂ.ಸಿ. ನಾಣಯ್ಯ ಅವರ ತೋಟದ ಮನೆಯ ಅಂಗಳದಲ್ಲಿ ಪ್ರತ್ಯಕ್ಷವಾದ ನಾಗರಹಾವನ್ನು ಹಾಕತ್ತೂರಿನ ಗ್ರಾ.ಪಂ. ಸದಸ್ಯ, ಉರಗ ರಕ್ಷಕ ಸ್ನೇಕ್ ಪಿಯೂಷ್ ಪೆರೇರಾ ಅವರು ಸೆರೆ ಹಿಡಿದು ರಕ್ಷಿಸಿದ್ದಾರೆ.
ಮತ್ತೊಂದೆಡೆ ಮೇಕೇರಿಯ ರಾಧಾ ಎಂಬವರ ಮನೆಯಲ್ಲಿ ಪತ್ತೆಯಾದ ಮಂಡಲ ಹಾವನ್ನು ಕೂಡ ಪೆರೇರಾ ಸೆರೆ ಹಿಡಿದಿದ್ದಾರೆ. ಎರಡೂ ಹಾವುಗಳನ್ನು ಅವರು ಸಂಪಾಜೆಯ ಅರಣ್ಯ ಭಾಗಕ್ಕೆ ಸುರಕ್ಷಿತವಾಗಿ ಬಿಟ್ಟಿದ್ದಾರೆ.
ಪಿಯೂಷ್ ಪೆರೇರಾ ಅವರು ಇಲ್ಲಿಯವರೆಗೆ ೭೨ ನಾಗರಹಾವು ಹಾಗೂ ೩೮ ವಿವಿಧ ಜಾತಿಯ ಹಾವುಗಳು ಸೇರಿದಂತೆ ಒಟ್ಟು ೧೧೦ ಹಾವುಗಳನ್ನು ಸೆರೆ ಹಿಡಿದು ರಕ್ಷಿಸಿದ್ದಾರೆ. ಹಾವುಗಳು ಎಲ್ಲೇ ಕಂಡು ಬಂದರೂ ಅದರ ಜೀವಕ್ಕೆ ಹಾನಿ ಮಾಡದೆ ತಮ್ಮ ಮೊ.ಸಂ: ೯೪೮೧೯೫೨೨೫೩ನ್ನು ಸಂಪರ್ಕಿಸುವAತೆ ಕೋರಿದ್ದಾರೆ.