ಮಡಿಕೇರಿ, ನ. ೨: ನರಿಯಂದಡ ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ನರಿಯಂದ ಬ್ಲಾಕ್ (೧) ಮತ್ತು (೨) ಕರಡು, ಅರಪಟ್ಟು, ಪೊದವಾಡ, ಕೋಕೇರಿ, ಚೇಲವಾರ ಗ್ರಾಮಗಳ ೨೦೧೯-೨೦ನೇ ಸಾಲಿನ ಮಿಷನ್ ಅಂತ್ಯೋದಯ ಗ್ರಾಮ ಸಭೆ ತಾ. ೪ ರಂದು ಪೂರ್ವಾಹ್ನ ೧೧ ಗಂಟೆಗೆ ಗ್ರಾ.ಪಂ. ಸಭಾಂಗಣದಲ್ಲಿ ಗ್ರಾ.ಪಂ. ಅಧ್ಯಕ್ಷೆ ಬೇಬಿ ಶಿವಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಮಕ್ಕಂದೂರು: ಮಕ್ಕಂದೂರು ಗ್ರಾ.ಪಂ.ನ ಮಿಷನ್ ಅಂತ್ಯೋದಯ ಕಾರ್ಯಕ್ರಮದಡಿ ಜಿಪಿಡಿಪಿ ಗ್ರಾಮ ಸಭೆ ತಾ. ೪ ರಂದು ಪೂರ್ವಾಹ್ನ ೧೦.೩೦ ಗಂಟೆಗೆ ಮಕ್ಕಂದೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಪಂಚಾಯಿತಿ ಅಧ್ಯಕ್ಷೆ ಕಾವೇರಮ್ಮ ಎಲ್.ಹೆಚ್. ಅವರ ಅಧ್ಯಕ್ಷತೆಯಲ್ಲಿ ಜರುಗಿದೆ.