ಮಡಿಕೇರಿ, ನ. 1: ಮಡಿಕೇರಿಯ ಹಿಂದೂ ಮಲೆಯಾಳಿ ಸಂಘದ ಆಶ್ರಯದಲ್ಲಿ ತಾ. 3ರಂದು ಓಣಾಘೋಷಂ ಓಣಂ ಸದ್ಯ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಇಲ್ಲಿನ ಮಂಗಳಾದೇವಿನಗರದಲ್ಲಿರುವ ಕ್ರಿಸ್ಟಲ್‍ಹಾಲ್‍ನಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಬೆಳಿಗ್ಗೆ 11 ಗಂಟೆಗೆ ಸಂಸದ ಪ್ರತಾಪ್ ಸಿಂಹ ಉದ್ಘಾಟಿಸುವರು. ಹಿಂದೂ ಮಲೆಯಾಳಿ ಸಂಘದ ಅಧ್ಯಕ್ಷ ಕೆ.ಎಸ್. ರಮೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಶಾಸಕರುಗಳಾದ ಅಪ್ಪಚ್ಚುರಂಜನ್, ಕೆ.ಜಿ. ಬೋಪಯ್ಯ, ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಮಲೆಯಾಳಿ ಸಮಾಜದ ಸೋಮವಾರಪೇಟೆ ಅಧ್ಯಕ್ಷ ವಿ.ಎಂ. ವಿಜಯ, ಚೆಟ್ಟಳ್ಳಿ ಸಮಿತಿ ಅಧ್ಯಕ್ಷ ಪಿ.ಕೆ. ಶಶಿಕುಮಾರ್, ಮೂರ್ನಾಡು ಅಧ್ಯಕ್ಷ ಕೆ. ಬಾಬು, ಕೊಡಗು ವಾಣಿಜ್ಯೋದ್ಯಮಿ ಸಹಕಾರ ಸಂಘದ ಅಧ್ಯಕ್ಷ ಕೆ.ಎಂ. ಗಣೇಶ್, ಓಣಂ ಸದ್ಯ ಆಚರಣಾ ಸಮಿತಿ ಅಧ್ಯಕ್ಷ ವಿ.ಪಿ. ಅಚ್ಯುತನಾಯರ್, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಪಿ.ಟಿ. ಉಣ್ಣಿಕೃಷ್ಣ ಆಗಮಿಸುವರು.

ನಾಳೆ ಓಣಾಘೋಷಂ - ಓಣಂ ಸದ್ಯ(ಮೊದಲ ಪುಟದಿಂದ) ಸಮಾರೋಪ ಸಮಾರಂಭ ಸಂಜೆ 4.30 ಗಂಟೆಗೆ ನಡೆಯಲಿದ್ದು, ವಿ.ಪಿ. ಅಚ್ಯುತನಾಯರ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮುತ್ತಪ್ಪ ದೇವಾಲಯ ಸಮಿತಿ ಅಧ್ಯಕ್ಷ ಟಿ.ಕೆ. ಸುಧೀರ್, ಎಸ್.ಎನ್.ಡಿ.ಪಿ. ಅಧ್ಯಕ್ಷ ಟಿ.ಆರ್. ವಾಸುದೇವನ್, ಕೆ.ಎನ್.ಎಸ್.ಎಸ್. ಅಧ್ಯಕ್ಷ ಕೆ.ಕೆ. ಹರೀಶ್ ಕುಮಾರ್, ಗುತ್ತಿಗೆದಾರ ಕೆ.ವಿ. ಸುಬ್ರಮಣಿ, ಬೆಳೆಗಾರ ಗೌತಮ್, ಉದ್ಯಮಿ ಎಂ. ರತಿಕೇಶನ್ ಉಪಸ್ಥಿತರಿರುವರು.

ಇದಕ್ಕೂ ಮುನ್ನ ಮಧ್ಯಾಹ್ನ 2 ಗಂಟೆಯಿಂದ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ 3.30 ಗಂಟೆಯಿಂದ ಜಿಲ್ಲಾಮಟ್ಟದ ಸಾಮೂಹಿಕ ನೃತ್ಯ ಸ್ಪರ್ಧೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಕೆ.ಎಸ್. ರಮೇಶ್ ತಿಳಿಸಿದ್ದಾರೆ.