ಸೋಮವಾರಪೇಟೆ, ನ. 1: ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯ, ಹೊರ ದೇಶಗಳಲ್ಲೂ ಕನ್ನಡ ರಾಜ್ಯೋತ್ಸವವನ್ನು ಯಾವದೇ ಧರ್ಮ ಭೇದವಿಲ್ಲದೇ ಆಚರಣೆ ಮಾಡುತ್ತಿರುವದು ಶ್ಲಾಘನೀಯ. ಕನ್ನಡವೇ ಎಲ್ಲರ ಉಸಿರಾಗಲಿ ಎಂದು ತಾಲೂಕು ತಹಶೀಲ್ದಾರ್ ಗೋವಿಂದರಾಜು ಹೇಳಿದರು.
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಇಲ್ಲಿನ ಜೂನಿಯರ್ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದ 64ನೇ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ಭಾಷೆಗಳ ಆಧಾರದಲ್ಲಿ ರಾಜ್ಯಗಳು ರೂಪುಗೊಂಡ ನಂತರ ಕರ್ನಾಟಕದ ಏಕೀಕರಣಕ್ಕಾಗಿ ಶ್ರಮಿಸಿದ ಮಹಾನ್ ನಾಯಕರ ಸ್ಮರಣೆ ಅತ್ಯಗತ್ಯ. ಕನ್ನಡ ಭಾಷೆಯ ಸಾಹಿತ್ಯ ಮೇರುಮಟ್ಟದಲ್ಲಿದ್ದು, ಸಂಸ್ಕøತಿಯೂ ಶ್ರೀಮಂತವಾಗಿವೆ. ಕೇವಲ ರಾಜ್ಯ ಮಾತ್ರವಲ್ಲದೇ, ಹೊರ ರಾಜ್ಯ, ವಿದೇಶಗಳಲ್ಲೂ ಕನ್ನಡಿಗರು
(ಮೊದಲ ಪುಟದಿಂದ) ಭಾಷೆಯ ಮೇಲಿನ ಅಭಿಮಾನದಿಂದ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವದು ಉತ್ತಮ ಬೆಳವಣಿಗೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಪಂಚಾ ಯಿತಿ ಅಧ್ಯಕ್ಷೆ ಪುಷ್ಪ ರಾಜೇಶ್ ಮಾತ ನಾಡಿ, ಕನ್ನಡ ವನ್ನು ಉಸಿರಿನ ಭಾಷೆ ಯಾಗಿ ಅಳವಡಿಸಿ ಕೊಳ್ಳಬೇಕು. ಒಂದು ದಿನಕ್ಕೆ ಮಾತ್ರ ಉತ್ಸವ ಸೀಮಿತವಾಗಬಾರದು. ಕನ್ನಡವನ್ನು ದಿನನಿತ್ಯ ಬಳಸಿದರೆ ಮಾತ್ರ ಭಾಷೆಯ ಸಾರ್ಥಕತೆ ಲಭಿಸುತ್ತದೆ ಎಂದು ಅಭಿಪ್ರಾಯಿಸಿದರು.
ಮುಖ್ಯ ಅತಿಥಿಯಾಗಿದ್ದ ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್ ಮಾತನಾಡಿ, ಕನ್ನಡವನ್ನು ಉಳಿಸುವ ಕಾರ್ಯ ಎಲ್ಲರಿಂದಲೂ ಆಗಬೇಕು. ಇತ್ತೀಚಿನ ವರದಿಗಳ ಪ್ರಕಾರ ಕನ್ನಡಿಗರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿರುವದು ವಿಪರ್ಯಾಸ. ಭಾಷೆಯ ಬಳಕೆ ನಿಂತರೆ ಕನ್ನಡದ ಬೆಳವಣಿಗೆ ಕ್ಷೀಣಿಸುತ್ತದೆ. ಉಪ ಭಾಷೆಗಳೂ ಸಹ ಕನ್ನಡದ ಬೆಳವಣಿಗೆಗೆ ಪೂರಕವಾಗಿರಬೇಕು ಎಂದರು.
ವೇದಿಕೆಯಲ್ಲಿ ಜಿ.ಪಂ. ಸದಸ್ಯೆ ಪೂರ್ಣಿಮಾ ಗೋಪಾಲ್, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಹೆಚ್.ಎನ್. ತಂಗಮ್ಮ, ಚೌಡ್ಲು ಗ್ರಾ.ಪಂ. ಅಧ್ಯಕ್ಷೆ ರಮ್ಯ ಕರುಣಾಕರ, ಪ.ಪಂ. ಸದಸ್ಯ ಶುಭಕರ್, ಠಾಣಾಧಿಕಾರಿ ಶಿವಶಂಕರ್, ಪ.ಪಂ. ಮುಖ್ಯಾಧಿಕಾರಿ ನಟರಾಜ್, ಪ್ರಭಾರ ಬಿಇಓ ಮಂಜೇಶ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಎಸ್. ಮಹೇಶ್, ಜೆ.ಸಿ. ಶೇಖರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕ್ಕಕೆ ಭಾಜನರಾದ ಉಪ ವಲಯ ಅರಣ್ಯಾಧಿಕಾರಿ ವೈ.ಕೆ. ಜಗದೀಶ್, ಕಬಡ್ಡಿ ತೀರ್ಪುಗಾರ ಸತೀಶ್ ಅವರುಗಳನ್ನು ಸನ್ಮಾನಿಸಲಾಯಿತು.
ಸ್ತಬ್ಧಚಿತ್ರ-ನೃತ್ಯ
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳಿಂದ ಮೂಡಿಬಂದ ಸ್ತಬ್ಧಚಿತ್ರ ಮತ್ತು ನೃತ್ಯ ರೂಪಕಗಳು, ಶಾಸ್ತ್ರೀಯ ಸ್ಥಾನಮಾನದ ಗರಿಯೊಂದಿಗೆ ಜ್ಞಾನಪೀಠಿಗಳನ್ನು ಪಡೆದಿರುವ ಕನ್ನಡ ಭಾಷೆ, ಕನ್ನಡ ನಾಡಿನ ವೈಭವವನ್ನು ಸಾಕ್ಷೀಕರಿಸಿತು.
ಪಟ್ಟಣದ ಜೇಸೀ ವೇದಿಕೆಯಿಂದ ವಿವಿಧ ಕಲಾತಂಡಗಳೊಂದಿಗೆ ಶಾಲೆಗಳ ಸ್ತಬ್ಧಚಿತ್ರಗಳ ಮೆರವಣಿಗೆ ನಡೆಯಿತು. ವಿದ್ಯಾರ್ಥಿಗಳು ಸಮವಸ್ತ್ರ, ಬ್ಯಾಂಡ್‍ಸೆಟ್‍ನೊಂದಿಗೆ ಭಾಗಿಯಾಗಿದ್ದರು. ಪೊಲೀಸ್ ಇಲಾಖೆ, ಗೃಹರಕ್ಷಕ ದಳ, ಸ್ಕೌಟ್ ಮತ್ತು ಗೈಡ್‍ನವರು ಮೆರವಣಿಗೆಯಲ್ಲಿದ್ದರು.
ಉದಯವಾಯಿತು ಚೆಲುವ ಕನ್ನಡ ನಾಡು ಎಂಬ ಘೋಷಣೆಯೊಂದಿಗೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು, ಕನ್ನಡ ನಾಡಿನ ಇತಿಹಾಸವನ್ನು ಬಿಂಬಿಸಿದರು. ಬೇಲೂರಿನ ಕಲಾ ವೈಭವವನ್ನು ಮಸಗೋಡು ಚನ್ನಮ್ಮ ಶಾಲೆಯ ವಿದ್ಯಾರ್ಥಿಗಳು ತೆರೆದಿಟ್ಟರು. ಪ್ರಕೃತಿ ವಿಕೋಪಕ್ಕೆ ಸ್ಪಂದಿಸಿ ಎಂಬ ಕಾಳಜಿಯೊಂದಿಗೆ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಸ್ತಬ್ಧಚಿತ್ರ ರಚಿಸಿದ್ದರು.
ಸಂತ ಜೋಸೆಫರ ಪ್ರೌಢಶಾಲೆಯ ವಿದ್ಯಾರ್ಥಿಗಳು ಒನಕೆ ಓಬವ್ವನ ಆಡಳಿತವನ್ನು ಬಿಂಬಿಸಿದರು. ಜ್ಞಾನ ವಿಕಾಸ ಶಾಲೆಯ ವಿದ್ಯಾರ್ಥಿಗಳು ಜ್ಞಾನ ದಾಸೋಹ-ಅಕ್ಷರ ದಾಸೋಹ ಘೋಷಣೆಯಡಿ ಸಿದ್ಧಗಂಗಾಶ್ರೀಗಳ ಸ್ಮರಣೆ ಮಾಡಿದರು. ಓಎಲ್‍ವಿ ಶಾಲೆಯ ವಿದ್ಯಾರ್ಥಿಗಳು ಕನ್ನಡ ನಾಡಿನ ಜಾನಪದ ಕಲಾವೈಭವವನ್ನು ಕಣ್ಮುಂದೆ ತಂದರು.
ಸ್ತಬ್ಧಚಿತ್ರಗಳ ಮೆರವಣಿಗೆಯಲ್ಲಿ ಮಸಗೋಡು ಚನ್ನಮ್ಮ ಶಾಲೆ ಪ್ರಥಮ, ವಿಶ್ವಮಾನವ ಕುವೆಂಪು ಶಾಲೆ ದ್ವಿತೀಯ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ತೃತೀಯ ಸ್ಥಾನ ಗಳಿಸಿದರು. ವಿಜೇತರಿಗೆ ಸಮಿತಿ ವತಿಯಿಂದ ಬಹುಮಾನ, ಎಲ್ಲಾ ಶಾಲೆಗಳ ಸ್ತಬ್ಧಚಿತ್ರಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.
ಆಕರ್ಷಿಸಿದ ನೃತ್ಯ: ವಿವಿಧ ಶಾಲೆ-ಕಾಲೇಜು ವಿಭಾಗದಲ್ಲಿ ಆಯೋಜಿಸಿದ್ದ ನೃತ್ಯ ಸ್ಪರ್ಧೆ ಕನ್ನಡಾಭಿಮಾನಿಗಳನ್ನು ಆಕರ್ಷಿಸಿತು. ಕನ್ನಡ ಭಾಷೆ, ಸಾಹಿತ್ಯ, ಸಂಗೀತ, ನೆಲ ಜಲದ ವೈಭವವನ್ನು ವಿದ್ಯಾರ್ಥಿಗಳು ಪ್ರೇಕ್ಷಕರೆದುರು ತೆರೆದಿಟ್ಟರು.
ಪ್ರಾಥಮಿಕ ಶಾಲಾ ವಿಭಾಗದ ನೃತ್ಯ ಸ್ಪರ್ಧೆಯಲ್ಲಿ ಓಎಲ್‍ವಿ ಶಾಲೆ ಪ್ರಥಮ, ಎಸ್‍ಜೆಎಂ ದ್ವಿತೀಯ ಹಾಗೂ ಸಾಂದೀಪನಿ ಶಾಲೆ ತೃತೀಯ ಸ್ಥಾನಗಳಿಸಿದವು. ಪ್ರೌಢಶಾಲಾ ವಿಭಾಗದಲ್ಲಿ ಮಸಗೋಡು ಚನ್ನಮ್ಮ ಶಾಲೆ ಪ್ರಥಮ, ಜ್ಞಾನವಿಕಾಸ ದ್ವಿತೀಯ, ಸರ್ಕಾರಿ ಪ್ರೌಢಶಾಲೆ ತೃತೀಯ ಸ್ಥಾನಗಳಿಸಿದವು.