ಮಡಿಕೇರಿ, ನ. ೨: ವೀರಾಜಪೇಟೆ ರೋಟರಿ ಟ್ರಸ್ಟ್ ವತಿಯಿಂದ ಬಿಟ್ಟಂಗಾಲದಲ್ಲಿ ನಿರ್ವಹಿಸಲ್ಪಡುತ್ತಿರುವ ರೋಟರಿ ಪ್ರೌಢಶಾಲೆಯಲ್ಲಿ ರೋಟರಿ ಇಂಟರಾಕ್ಟ್ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿತು.

ಕ್ಲಬ್‌ನ ನೂತನ ಅಧ್ಯಕ್ಷರಾಗಿ ರೋಹನ್ ಚಂದ್ರಶೇಖರ್ ಮತ್ತು ಕಾರ್ಯದರ್ಶಿಯಾಗಿ ಹಿಮಾ ತಂಗಮ್ಮ ಪದಗ್ರಹಣ ಪಡೆದರು. ರೋಟರಿ ಜಿಲ್ಲೆ ೩೧೮೧ ನ ಗವರ್ನರ್ ಜೊಸೇಫ್ ಮ್ಯಾಥ್ಯು ಪ್ರತಿಜ್ಞಾ ವಿಧಿ ಬೋಧಿಸಿದರು.

ರೋಟರಿ ವಲಯ ೬ ರ ಕಾರ್ಯದರ್ಶಿ ಪಿ. ನಾಗೇಶ್, ಜೋನಲ್ ಲೆಫ್ಟಿನೆಂಟ್ ಡಾ. ಎಸ್.ವಿ. ನರಸಿಂಹನ್, ವೀರಾಜಪೇಟೆ ರೋಟರಿ ಅಧ್ಯಕ್ಷ ಆದಿತ್ಯ, ಕಾರ್ಯದರ್ಶಿ ಭರತ್ ರಾಮ್ ರೈ, ರೋಟರಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಸುನೀಲ್ ನಾಣಯ್ಯ, ಮುಖ್ಯೋಪಾಧ್ಯಾಯಿನಿ ಇಶ್ರತ್ ಫಾತಿಮ, ರೋಟರಿ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಇಂಟರಾಕ್ಟ್ ಕ್ಲಬ್‌ನ ನೂತನ ಆಡಳಿತ ಮಂಡಳಿ ಸದಸ್ಯರಾಗಿ ಮುತ್ತಣ್ಣ, ಸಾನಿಯಾ, ರಿಶನಾ, ಐಶ್ವರ್ಯ, ಪ್ರಮಾಣ್, ಶಾರೀದ್, ತೃಷಾ, ಪ್ರಣಯ್ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.