ಕುಶಾಲನಗರ, ನ. ೨: ಕುಶಾಲನಗರದ ಹಿಂದೂ ಜನಜಾಗೃತಿ ಸಮಿತಿ ಹಾಗೂ ಹಿಂದೂಪರ ಸಂಘಟನೆಗಳ ವತಿಯಿಂದ ಹಿಂದೂ ಜನಜಾಗೃತಿ ಆಂದೋಲನ ನಡೆಯಿತು.
ಪಟ್ಟಣದ ಗಣಪತಿ ದೇವಾಲಯ ಮುಂಭಾಗ ನಡೆದ ಕಾರ್ಯಕ್ರಮದಲ್ಲಿ ಹಿಂದೂ ಸಂಸ್ಕೃತಿಗೆ ಉಂಟಾಗುತ್ತಿರುವ ಅಪಚಾರದ ಬಗ್ಗೆ ಪ್ರಚಾರ ಮಾಡಲಾಯಿತು.
ಭಿತ್ತಿ ಫಲಕಗಳನ್ನು ಹಿಡಿದು ಘೋಷಣೆ ಕೂಗುವ ಮೂಲಕ ಸಮಿತಿ ಕಾರ್ಯಕರ್ತರು ಜನರಲ್ಲಿ ಜಾಗೃತಿ ಮೂಡಿಸಿದರು.
ಆಂಧ್ರಪ್ರದೇಶದಲ್ಲಿ ದಸರಾ ಮತ್ತು ಸಂಕ್ರಾAತಿಯ ಸಮಯದಲ್ಲಿ ರೈಲ್ವೇ ಟಿಕೆಟಿನ ದರವನ್ನು ಹೆಚ್ಚಿಸಿರುವ ಕ್ರಮವನ್ನು ವಿರೋಧಿಸಿದ ಕಾರ್ಯಕರ್ತರು, ಮೇಘಾಲಯದ ಎನ್.ಐ.ಟಿ.ಯಲ್ಲಿ ಸ್ಥಾಪಿಸಲಾಗಿದ್ದ ಗಣೇಶ ಮೂರ್ತಿಯನ್ನು ತೆರವುಗೊಳಿಸಲಾಗಿದೆ. ಅದಕ್ಕೆ ಬೇಡಿಕೆ ನೀಡಿದ್ದ ಎನ್.ಐ.ಟಿ. ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ತ್ರಿಪುರಾದಲ್ಲಿನ ಉಚ್ಚ ನ್ಯಾಯಾಲಯವು ದೇವಸ್ಥಾನಗಳಲ್ಲಿ ಬಲಿ ನೀಡುವ ಸಂಪ್ರದಾಯದ ವಿರುದ್ಧ ನಿಷೇಧವನ್ನು ಹೇರಿದೆ. ತ್ರಿಪುರ ರಾಜ್ಯ ಸರ್ಕಾರವು ದೇವಸ್ಥಾನಗಳಲ್ಲಿ ಬಲಿ ನೀಡಲು ಕಾನೂನು ರೂಪಿಸಬೇಕು. ಕರ್ನಾಟಕದಲ್ಲಿ ಗೋಹತ್ಯಾ ನಿಷೇಧ ಕಾನೂನನ್ನು ಮರು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭ ಹಿಂದೂ ಜನಜಾಗೃತಿ ಸಮಿತಿ ಮೈಸೂರು ಸಮನ್ವಯಕ್ ಶಿವರಾಂ ಮಾತನಾಡಿ, ಪ್ರಸ್ತುತ ಹಿಂದೂಗಳ ಮೇಲೆ ಉಂಟಾಗುತ್ತಿರುವ ದೌರ್ಜನ್ಯದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಆಂದೋಲನದಲ್ಲಿ ಸಮಿತಿಯ ಪ್ರಮುಖರಾದ ಶ್ರೀನಾಥ್, ಬಿ.ಎಂ. ರವಿಚಂದ್ರ, ಶ್ರೀಲಕ್ಷಿö್ಮ, ದೀಪ, ಉಮಾ, ಸುಮನ್, ಆದರ್ಶ್, ಭಜರಂಗದಳದ ರಾಜೀವ್, ಅನಂತ್ ಮತ್ತಿತರರು ಇದ್ದರು.