ಮಡಿಕೇರಿ, ನ. ೨: ಮಡಿಕೇರಿಯಲ್ಲಿ ಅ. ೨೯ ರಂದು ನಡೆದ ಅಂತರ ಕೊಡವಕೇರಿ ಮೇಳದಲ್ಲಿ ವಿನಾಯಕಕೇರಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಕೋಲಾಟ್, ಬೊಳಕಾಟ್, ತಾಲಿಪಾಟ್, ಪರೆಯಕಳಿಯಲ್ಲಿ ಪ್ರಥಮ ಸ್ಥಾನ, ಬಾಳೋಪಾಟ್‌ನಲ್ಲಿ ದ್ವಿತೀಯ ಹಾಗೂ ಸಮ್ಮಂದ ಅಡ್‌ಕುವ ಸ್ಪರ್ಧೆಯಲ್ಲಿ ಈ ಕೇರಿ ತೃತೀಯ ಸ್ಥಾನ ಪಡೆದುಕೊಂಡಿತು.

ಫಲಿತಾAಶ

ಕೋಲಾಟ್: ವಿನಾಯಕಕೇರಿ, ದೇಚೂರುಕೇರಿ, ಸುದರ್ಶನಕೇರಿ, ಬೊಳಕಾಟ್: ವಿನಾಯಕಕೇರಿ, ದೇಚೂರುಕೇರಿ, ಕಾವೇರಿಕೇರಿ, ಉಮ್ಮತ್ತಾಟ್: ಕಾವೇರಿಕೇರಿ, ದೇಚೂರುಕೇರಿ, ಮುತ್ತಪ್ಪಕೇರಿ, ಬಾಳೋಪಾಟ್: ದೇಚೂರುಕೇರಿ, ವಿನಾಯಕಕೇರಿ, ಮುತ್ತಪ್ಪಕೇರಿ, ಪರೆಯಕಳಿ : ವಿನಾಯಕಕೇರಿ, ದೇಚೂರು ಕೇರಿ, ಕಾವೇರಿಕೇರಿ, ಸಮ್ಮಂದ ಅಡ್‌ಕ್‌ವೊ : ಮುತ್ತಪ್ಪಕೇರಿ, ದೇಚೂರುಕೇರಿ, ವಿನಾಯಕಕೇರಿ, ತಾಲಿಪಾಟ್: ವಿನಾಯಕಕೇರಿ, ಸುದರ್ಶನಕೇರಿ, ದೇಚೂರುಕೇರಿ.

ಕಪ್ಪೆಯಾಟ್: (ಪುರುಷರು) ದೇಚೂರುಕೇರಿ, ಗಣಪತಿಕೇರಿ, ಎಫ್‌ಎಂಸಿಕೇರಿ, ಕೊಡವ ಪಾಟ್: ಸುಬ್ರಹ್ಮಣ್ಯಕೇರಿ, ಸುದರ್ಶನಕೇರಿ, ದೇಚೂರುಕೇರಿ, ವಾಗಲತಾಟ್: (ಪುರುಷರು) ಮೋಟನಾಳಿರ ಸನ್ನಿ ಕಾವೇರಪ್ಪ (ಕಾವೇರಿ), (ಮಹಿಳೆಯರು) ಮಾದೇಟಿರ ಪ್ರಮೀಳಾ (ದೇಚೂರು), (ಬಾಲಕರು) ತಾಪಂಡ ಲಿಖಿತ್ (ದೇಚೂರು), (ಬಾಲಕಿಯರು) ಚೆನ್ನಪಂಡ ಲಿಖಿತ್.

ಸಾಂಪ್ರದಾಯ ಉಡುಪು

ಪುರುಷರು - ಮಣವಟ್ಟಿರ ಚಿಣ್ಣಪ್ಪ, ಮಹಿಳೆಯರು - ಮೊಣ್ಣಂಡ ಜೂಬಿ ಸೋಮಯ್ಯ, ಬಾಲಕರು - ಬೊಳ್ಳಜೀರ ಬೋಪಣ್ಣ, ಬಾಲಕಿಯರು - ಬಲ್ಲಾರಂಡ ಬ್ಯೂಟಿ ಸೀತಮ್ಮ.

ದೂರವಾಣಿ ಕೈಪಿಡಿ

ನಗರ ವ್ಯಾಪ್ತಿಯ ೧೨ ಕೊಡವಕೇರಿಗಳ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಪ್ರಸ್ತುತ ಇರುವ ಆಡಳಿತ ಮಂಡಳಿ ಸದಸ್ಯರ ದೂರವಾಣಿ ಮೊಬೈಲ್ ಸಂಖ್ಯೆ ಇರುವ ಕೈಪಿಡಿಯನ್ನು ಮೇಳದ ಸಂದರ್ಭ ನೀಡಲಾಯಿತು. ಮುತ್ತಪ್ಪಕೇರಿಯ ಉಪಾಧ್ಯಕ್ಷ ಶಾಂತೆಯAಡ ಸನ್ನಿ ಪೂವಯ್ಯ ಅವರು ಪ್ರಾಯೋಜಿಸಿದ್ದಾರೆ.