ಕುಶಾಲನಗರ, ಅ. 31: ಭಾರತೀಯ ಸೇನೆಗೆ ಸೇರಲು ಮಡಿಕೇರಿಯಲ್ಲಿ ನಡೆದ ಸೇನಾ ಆಯ್ಕೆ ಶಿಬಿರದಲ್ಲಿ ನೇಮಕವಾಗಿರುವ ಅಭ್ಯರ್ಥಿಗಳಿಗೆ ಕುಶಾಲನಗರದ ಅನುಗ್ರಹ ಕಾಲೇಜು ಸಭಾಂಗಣದಲ್ಲಿ ಲಿಖಿತ ಪರೀಕ್ಷೆಯ ಉಚಿತ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು.

ಮಾಜಿ ಸೈನಿಕ ಗಣೇಶ್ ಪೊನ್ನಪ್ಪ ಕಾರ್ಯಗಾರಕ್ಕೆ ಚಾಲನೆ ನೀಡಿದರು. ನಿವೃತ್ತ ಹವಾಲ್ದಾರ್ ಜನಾರ್ಧನ್ ಮಾತನಾಡಿ, ಸೇನೆಗೆ ಸೇರುವ ಮಕ್ಕಳಿಗೆ ಉಚಿತವಾದ ತರಬೇತಿ ನೀಡಲಾಗುತ್ತದೆ ಎಂದರಲ್ಲದೆ ನುರಿತ ಸಂಪನ್ಮೂಲ ಶಿಕ್ಷಕರಿಂದ ಜನವರಿ 16 ರವರೆಗೆ ಉಚಿತವಾಗಿ ಪ್ರತಿ ಶನಿವಾರ ಹಾಗೂ ಭಾನುವಾರ ತರಗತಿ ಹಮ್ಮಿಕೊಳ್ಳಲಾಗುವದು ಎಂದರು.