ಮಡಿಕೇರಿ, ಅ. 31: ಕೂರ್ಗ್ ಕಾಫಿ ವುಡ್ ಮೂವೀಸ್ ಬ್ಯಾನರ್‍ನಡಿಯಲ್ಲಿ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ನಿರ್ಮಾಣ ಮತ್ತು ನಿರ್ದೇಶನದ ‘ಕೊಡಗ್‍ರ ಸಿಪಾಯಿ’ ಚಲನಚಿತ್ರ ಪ್ರದರ್ಶನ ಕುಟ್ಟ ಕೊಡವ ಸಮಾಜದಲ್ಲಿ ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷÀ ಕಳ್ಳಿಚಂಡ ವಿಷ್ಣುಕಾರ್ಯಪ್ಪ, ಕೊಡವ ಭಾಷಾ ಚಲನಚಿತ್ರಗಳಿಗೆ ಎಲ್ಲರ ಸಹಕಾರ ಅಗತ್ಯವೆಂದರು. ಮೂವತ್ತೊಂದು ಕೊಡವ ಸಮಾಜಗಳ ಪ್ರೋತ್ಸಾಹÀದಿಂದ ಕೊಡಗ್‍ರ ಸಿಪಾಯಿ ಚಲನಚಿತ್ರ ಕೊಡಗು ಸೇರಿದಂತೆ ರಾಜ್ಯದ ಇತರೆಡೆ ಯಶಸ್ವೀ ಪ್ರದರ್ಶನ ಕಾಣುತ್ತಿರುವದು ಹೆಮ್ಮೆಯ ವಿಚಾರವೆಂದರು.
ಪ್ರಾಸ್ತವಿಕವಾಗಿ ಮಾತನಾಡಿದ ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ಹಾಗೂ ಹಿರಿಯ ನಟ ವಾಂಚೀರ ವಿಠಲ್ ನಾಣಯ್ಯ, ಕೊಡವ ಚಲನಚಿತ್ರಗಳು ಬೆಳೆದು ಬಂದ ಹಾದಿಯ ಬಗ್ಗೆ ವಿವರಿಸಿದರು. ನಿರ್ಮಾಣ, ನಿರ್ವಹಣೆಯ ಜವಬ್ದಾರಿ ನಿಭಾಯಿಸಿದ ನಟ ಹಾಗೂ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಮಾತನಾಡಿ, ಚಿತ್ರ ಪ್ರದರ್ಶನದ ವಿವರ ನೀಡಿದರು. ಟಿ. ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ನ. 1ಕ್ಕೆ ಹಾಗೂ ನ. 5ಕ್ಕೆ ಮೂರ್ನಾಡು ಕೊಡವ ಸಮಾಜದಲ್ಲಿ ಚಿತ್ರ ಪ್ರದರ್ಶನ ಕಾಣಲಿದೆ ಎಂದರು.
ಕುಟ್ಟ ಕೊಡವ ಸಮಾಜದ ಖಜಾಂಚಿ ಸುಬ್ರಮಣಿ, ನಟ ಬಿದ್ದಂಡ ಉತ್ತಮ್ ಪೊನ್ನಪ್ಪ, ಕೊಡಗ್‍ರ ಸಿಪಾಯಿ ಕಾದಂಬರಿ ಬರಹಗಾರ್ತಿ ಉಳುವಂಗಡ ಕಾವೇರಿ ಉದಯ, ಚಿತ್ರದ ಪ್ರದರ್ಶನ ಹಕ್ಕು ಪಡೆದಿರುವ ಬಾಳೆಯಡ ಪ್ರತೀಶ್ ಪೂವಯ್ಯ, ಗಗನ್ ಗಣಪತಿ ಉಪಸ್ಥಿತರಿದ್ದರು.
ಚೋಡುಮಾಡ ಗೀತಾ ಪ್ರಾರ್ಥಿಸಿ, ಬೊಳ್ಳಜಿರ ಬಿ. ಅಯ್ಯಪ್ಪ ಸ್ವಾಗತಿಸಿ, ವಂದಿಸಿದರು.