ಕೂಡಿಗೆ, ಅ. 31: ಕೂಡಿಗೆ-ಹಾಸನ ಹೆದ್ದಾರಿಯಲ್ಲಿ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡುಮಂಗಳೂರು ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ಮತ್ತು ಕೂಡಿಗೆ ಡೈರಿ ಸರ್ಕಲ್ನ ರಸ್ತೆಯ ಬದಿಗಳ ಕಸದ ತೊಟ್ಟಿಯಲ್ಲಿ ಕಳೆದ ಹತ್ತು ದಿನಗಳಿಂದಲೂ ಕಸದ ರಾಶಿ ತುಂಬಿ ರಸ್ತೆಯಲೆಲ್ಲಾ ಹರಡಿದ್ದು, ಗಬ್ಬೆದ್ದು ನಾರುತಿದ್ದರೂ ಸಹ ಕೂಡುಮಂಗಳೂರು ಗ್ರಾ.ಪಂ. ಸ್ವಚ್ಛಗೊಳಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕಸದ ತೊಟ್ಟಿಗೆ ಅಂಗಡಿ ಮಳಿಗೆಗಳು, ಮನೆಗಳಿಂದ ಕಸವನ್ನು ತಂದು ಹಾಕುತ್ತಿದ್ದು, ಕಸದ ತೊಟ್ಟಿಯು ತುಂಬಿ ಕಸ ನೆಲದಲ್ಲಿ ಚೆಲ್ಲಾಡುತ್ತಿದೆ. ಪಕ್ಕದಲ್ಲಿಯೆ ಬಸ್ ನಿಲ್ದಾಣ ಇರುವದರಿಂದ ನೂರಾರು ಪ್ರಯಾಣಿಕರು ದುರ್ವಾಸನೆಯಿಂದಾಗಿ ಬಸ್ ನಿಲ್ದಾಣದಲ್ಲಿ ನಿಲ್ಲಲಾಗದ ಪರಿಸ್ಥಿತಿ ಎದುರಾಗಿದೆ.