ಮಡಿಕೇರಿ, ಅ. 31: ಮಡಿಕೇರಿ ರಕ್ಷಣಾ ವೇದಿಕೆ ಮತ್ತು ಕಲಾ ಸಾಗರ್ ಅಕಾಡೆಮಿ ನೇತೃತ್ವದಲ್ಲಿ ತಾ. 1 ರಂದು (ಇಂದು) ಬೆಳಿಗ್ಗೆ 8.30 ಗಂಟೆಗೆ ಡಿ.ಸಿ.ಸಿ. ಬ್ಯಾಂಕಿನ ಮುಂಭಾಗ ರಾಷ್ಟ್ರ ಕವಿ ಕುವೆಂಪು ಅವರ ಪುತ್ಥಳಿ ಇರುವ ವಿಶ್ವಮಾನವ ಉದ್ಯಾನವನದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ಹಮ್ಮಿಕೊಳ್ಳಲಾಗಿದೆ.

ಧ್ವಜಾರೋಹಣವನ್ನು ವೇದಿಕೆಯ ಅಧ್ಯಕ್ಷ ಪವನ್ ಪೆಮ್ಮಯ್ಯ ನೆರವೇರಿಸಲಿದ್ದಾರೆ ಕುವೆಂಪು ಅವರ ಪುತ್ಥಳಿಗೆ ಸಾಗರ್ ಹಫೀಜ್ ಮಾಲಾರ್ಪಣೆ ಮಾಡಲಿದ್ದಾರೆ.