ವೀರಾಜಪೇಟೆ, ಅ. 31: ಹಿಂದೂ ಸಮಾಜವು ಸಧೃಡವಾಗಿ ಬಲಿಷ್ಟವಾಗಿರಲು ಸಂಸ್ಕøತಿ-ಸಂಸ್ಕಾರಗಳು ಬಹುಮುಖ್ಯವಾಗಿ ಪರಿಗಣಿಸಲ್ಪಡುತ್ತದೆ ಎಂದು ದುರ್ಗಾ ವಾಹಿನಿಯ ಪ್ರಾಂತ ಸಂಯೋಜಕಿ ವಿದ್ಯಾ ಮಲ್ಯ ಹೇಳಿದರು.

ವಿಶ್ವ ಹಿಂದೂ ಪರಿಷತ್ ಮತ್ತು ದುರ್ಗಾ ವಾಹಿನಿ ವೀರಾಜಪೇಟೆ ತಾಲೂಕು ಇವರುಗಳ ಆಶ್ರಯದಲ್ಲಿ ನಗರದ ಮಹಿಳಾ ಸಮಾಜದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ದೀಪಲಕ್ಷ್ಮೀ ಪೂಜೆ ಮತ್ತು ಗೋ ಪೂಜೆಯ ಕಾರ್ಯಕ್ರಮಕ್ಕೆ ಮುಖ್ಯ ಭಾಷಣಕಾರರಾಗಿ ಆಗಮಿಸಿ ಅವರು ಮಾತನಾಡಿದರು. ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಂಪರ್ಕ ಪ್ರಮುಖ್ ಅಜಿತ್ ಕುಮಾರ್ ಮಾತನಾಡಿ, ಇಂದು ಹಲವು ದೇಶಗಳಲ್ಲಿ ವಿಶ್ವ ಹಿಂದೂ ಪರಿಷತ್‍ನ ಕಾರ್ಯಧಕ್ಷತೆಯಿಂದ ಹಿಂದೂ ಸಮಾಜ ಬಲಿಷ್ಟವಾಗಿ ನೆÀಲೆನಿಲ್ಲುವಂತಾಗಿದೆ ಎಂದರು.

ವಿಶ್ವ ಹಿಂದೂ ಪರಿಷತ್ ವೀರಾಜಪೇಟೆ ತಾಲೂಕು ಅಧ್ಯಕ್ಷ ಸಣ್ಣುವಂಡ ಗಣೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಾತೃಶಕ್ತಿ ಸಂಘಟನೆಯ ತಾಲೂಕು ಅಧ್ಯಕ್ಷೆ ಪೂನಂ ಅಶೋಕ್ ಮತ್ತು ದುರ್ಗಾ ವಾಹಿನಿ ಜಿಲ್ಲಾ ಸಂಯೋಜಕಿ ಅಂಬಿಕಾ ಉತ್ತಪ್ಪ ಉಪಸ್ಥಿತರಿದ್ದರು.

- ಕೆ.ಕೆ.ಎಸ್. ವೀರಾಜಪೇಟೆ