ಕುಶಾಲನಗರ, ಅ. 31: ಕುಶಾಲನಗರ ಶ್ರೀ ಕೋಣಮಾರಿಯಮ್ಮ ದೇವಾಲಯದ 17ನೇ ವರ್ಷದ ವಾರ್ಷಿಕ ಪೂಜಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಕಾವೇರಿ ನದಿಯಿಂದ ಗಂಗಾಜಲವನ್ನು ಮೆರವಣಿಗೆ ಮೂಲಕ ಕಲಶಗಳಲ್ಲಿ ತಂದು ದೇವಿಯ ವಿಗ್ರಹ ಪ್ರತಿಷ್ಠಾಪಿಸಲಾಯಿತು. ದೇವಿಯ ಸನ್ನಿಧಿಯಲ್ಲಿ ಗಣಪತಿ ಹೋಮ, ತೀರ್ಥಪ್ರಸಾದ ವಿನಿಯೋಗ, ಮಂಗಳಾರತಿ ನಂತರ ಅನ್ನದಾನ ಕಾರ್ಯಕ್ರಮ ನಡೆಯಿತು.
ಕುಶಾಲನಗರ ದೇವಾಲಯ ಒಕ್ಕೂಟದ ಪದಾಧಿಕಾರಿಗಳು ತೆರಳಿ ಸಾಮೂಹಿಕವಾಗಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ದೀಪಾಲಂಕಾರ ಮತ್ತು ವಿದ್ಯುತ್ ಅಲಂಕೃತ ಮಂಟಪದಲ್ಲಿ ವೀರಗಾಸೆ, ಡೊಳ್ಳು ಕುಣಿತದೊಂದಿಗೆ ದೇವಿಯ ಮೆರವಣಿಗೆ ನಡೆಯಿತು. ದೇವಾಲಯ ಸಮಿತಿ ಅಧ್ಯಕ್ಷ ಶಿವಾನಂದ್ ಮತ್ತಿತರರು ಇದ್ದರು.