*ಗೋಣಿಕೊಪ್ಪಲು, ಅ. 31: ನವೆಂಬರ್ 1ರಂದು ಗೋಣಿಕೊಪ್ಪಲು ಆಟೋ ಮಾಲೀಕರ ಹಾಗೂ ಚಾಲಕರ ಸಂಘದ ವತಿಯಿಂದ ನಡೆಯಬೇಕಿದ್ದ ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಮಳೆಯ ಕಾರಣದಿಂದ ಮುಂದೂಡಲಾಗಿದ್ದು, ತಾ. 17ರಂದು ಕಾರ್ಯಕ್ರಮ ನಡೆಸಲಾಗುವದು ಎಂದು ಸಂಘದ ಅಧ್ಯಕ್ಷ ಜಿಮ್ಮ ಸುಬ್ಬಯ್ಯ ತಿಳಿಸಿದ್ದಾರೆ.

ತಾ. 17ರಂದೇ ಆಯೋಜಿಸಿರುವ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ಅಂದು ಬೆಳಿಗ್ಗೆ ಗ್ರೀಸ್ ಕಂಬ ಹತ್ತುವ ಸ್ಪರ್ಧೆ, ಮತ್ತು ವಿವಿಧ ಸಾಂಸ್ಕೃತಿಕ ವೈಭವ ಮೆರೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.