ಗೋಣಿಕೊಪ್ಪಲು, ಅ. 31: ಇತ್ತೀಚೆಗೆ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ರೆಡ್ ಕ್ರಾಸ್ ಘಟಕದ ವತಿಯಿಂದ ಮಧುಮೇಹ ರೋಗದ ಲಕ್ಷಣಗಳು ಹಾಗೂ ನಿಯಂತ್ರಣದ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭ ವೈದ್ಯ ಡಾ. ಚಂದ್ರಶೇಖರ್ ಮಾತನಾಡಿ, ನಿಗದಿತ ಸಮಯಕ್ಕೆ ಆಹಾರ ಸೇವನೆ, ನಿಯಮಿತ ವ್ಯಾಯಾಮ ಮೂಲಕ ಮಧುಮೇಹವನ್ನು ನಿಯಂತ್ರಣಕ್ಕೆ ತರಬಹುದು ಎಂದರು.
ಪ್ರಾಂಶುಪಾಲರಾದ ಪ್ರೊ. ಕೆ.ವಿ. ಕುಸುಮಧರ್, ಉಪ ಪ್ರಾಂಶುಪಾಲ ಡಾ. ಎ.ಎಸ್. ಪೂವಮ್ಮ, ಹಾಗೂ ರೆಡ್ ಕ್ರಾಸ್ ಸಂಚಾಲಕ ಎಂ.ಎ. ಕುಶಾಲಪ್ಪ, ಸದಸ್ಯರಾದ ಕೆ.ಕೆ. ಕಾವೇರಮ್ಮ, ಪ್ರಕೃತಿ, ಇಬ್ರಾಹಿಂ ಇದ್ದರು.