ಮಡಿಕೇರಿ, ಅ. 31: ಬಿಳುಗುಂದ ಗ್ರಾಮ ಪಂಚಾಯಿತಿಯ 2019-20ನೇ ಸಾಲಿನ ಬಿಳುಗುಂದ, ನಲ್ವತೋಕ್ಲು, ಹೊಸಕೋಟೆ ಗ್ರಾಮಗಳ ಗ್ರಾಮ ಸಭೆಯನ್ನು ಹಾಗೂ “ಸಭ್ ಕೀ ಯೋಜನಾ ಸಭ್ ಕಾ ವಿಕಾಸ್” ಹಾಗೂ “ನಮ್ಮ ಗ್ರಾಮ ನಮ್ಮ ಯೋಜನೆ”ಯಡಿ ಗ್ರಾಮ ಸಭೆಯನ್ನು ತಾ. 6 ರಂದು ಪೂರ್ವಾಹ್ನ 11 ಗಂಟೆಗೆ ಬಿಳುಗುಂದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಎ. ಅಲೀಮ ಅಧ್ಯಕ್ಷತೆಯಲ್ಲಿ ಬಿಳುಗುಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ.