ನಾಪೋಕ್ಲು, ಅ. 31: ನಾರಾಯಣ ಗುರು ಧರ್ಮ ಪರಿ ಪಾಲನಾ ಯೋಗಂನ ನಾಪೋಕ್ಲು ಶಾಖೆ ವತಿಯಿಂದ ಪ್ರಥಮ ವರ್ಷದ ಓಣಂ ಆಚರಣೆ ಹಾಗೂ 165ನೇ ವರ್ಷದ ನಾರಾಯಣ ಗುರು ಜಯಂತಿಯನ್ನು ನ. 4 ರಂದು ಆಚರಿಸಲಾಗುವದೆಂದು ಎಸ್‍ಎನ್ ಡಿಪಿ ನಾಪೋಕ್ಲು ಶಾಖೆಯ ಅಧ್ಯಕ್ಷ ಟಿ.ಸಿ. ರಾಜೀವನ್ ತಿಳಿಸಿದ್ದಾರೆ.

ನಾಪೋಕ್ಲು ಎಸ್‍ಎನ್‍ಡಿಪಿ ಕಚೇರಿಯಲ್ಲಿ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ನ. 4 ರಂದು ಬೆಳಿಗ್ಗೆ ಆರು ಗಂಟೆಯಿಂದ 9 ಗಂಟೆಯವರೆಗೆ ಪೂಕಳಂ ಸ್ಫರ್ಧೆಯನ್ನು ಆಯೋಜಿಸಲಾಗಿದೆ.

ಬಳಿಕ 9.30 ಗಂಟೆಗೆ ನಾರಾಯಣ ಗುರುಗಳ ಭಾವಚಿತ್ರ ದೊಂದಿಗೆ ಅಲಂಕೃತ ಮಂಟಪದಲ್ಲಿ ಕೇರಳದ ವಾದ್ಯಗೋಷ್ಠಿಯೊಂದಿಗೆ ನಾಪೋಕ್ಲು ಮಾರುಕಟ್ಟೆಯಿಂದ ಪಟ್ಟಣದ ಮುಖ್ಯಬೀದಿಗಳ ಮೂಲಕ ಶ್ರೀ ಗುರು ಪೊನ್ನಪ್ಪ ಸಭಾಂಗಣದವರೆಗೆ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.

ಮೆರವಣಿಗೆಯನ್ನು ಎಸ್‍ಎನ್ ಡಿಪಿ ನಾಪೋಕ್ಲು ಶಾಖೆಯ ಅಧ್ಯಕ್ಷ ಉದ್ಘಾಟಿಸಲಿದ್ದು, ಬಳಿಕ ನಡೆಯುವ ಸಭಾ ಕಾರ್ಯಕ್ರಮವನ್ನು ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸ ಲಿರುವರು. ಮುಖ್ಯ ಅತಿಥಿಗಳಾಗಿ ಎಸ್‍ಎನ್‍ಡಿಪಿ ಜಿಲ್ಲಾಧ್ಯಕ್ಷ ಕೆ.ಜಿ. ಬಾಲಕೃಷ್ಣ, ಜಿ.ಪಂ. ಸದಸ್ಯ ಮುರುಳಿ ಕರುಂಬಮಯ್ಯ, ನಾಪೋಕ್ಲು ಗ್ರಾ.ಪಂ. ಅಧ್ಯಕ್ಷ ಕೆ.ಎ.ಇಸ್ಮಾಯಿಲ್, ಉಪಾಧ್ಯಕ್ಷ ಕಾಳೆಯಂಡ ಸಾಬ ತಿಮ್ಮಯ್ಯ, ಮಡಿಕೇರಿ ತಾಲೂಕು ಎಪಿಎಂಸಿ ಅಧ್ಯಕ್ಷರು ಹಾಗೂ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಎಸ್. ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಮಡಿಕೇರಿ ತಾ.ಪಂ. ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ, ಎಸ್‍ಎನ್‍ಡಿಪಿ ಕೊಡಗು ಯೂನಿಯನ್ ನಿರ್ದೇಶಕ ಟಿ.ಎ. ಮಿಟ್ಟು ಪಾಲ್ಗೊಳ್ಳಲಿರುವರು.

ಮಧ್ಯಾಹ್ನ 2.30ಕ್ಕೆ ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಹಗ್ಗಜಗ್ಗಾಟ ಸ್ಫರ್ಧೆಗಳು ನಡೆಯಲಿವೆ. ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ಒಂದು ವಾರಕ್ಕೆ ಮುಂಚಿತವಾಗಿ ಶಾಖೆಯಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ತಿಳಿಸಿದರು. ಪೂಕಳಂ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ಹೂವಿನಿಂದಲೇ ರಂಗೋಲಿ ಬಿಡಿಸತಕ್ಕದ್ದು ಹಾಗೂ ನಾಲ್ಕು ದಿನ ಮುಂಚಿತವಾಗಿ ಹೆಸರು ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಿದರು.

ಬಳಿಕ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಎ. ಮನ್ಸೂರ್ ಆಲಿ, ವಿಹೆಚ್‍ಪಿ ಸಂಪರ್ಕ ಪ್ರಮುಖ್ ಎನ್.ಕೆ. ಅಜಿತ್‍ಕುಮಾರ್, ಕೊಳಕೇರಿಯ ಕಾಫಿ ಬೆಳೆಗಾರ ಬಿದ್ದಾಟಂಡ ಟಿ. ಕಾರ್ಯಪ್ಪ, ಬಿಲ್ಲವ ಸೇವಾ ಸಮಾಜದ ಜಿಲ್ಲಾಧ್ಯಕ್ಷ ಬಿ.ವೈ. ಆನಂದ ರಘು, ನಾಪೋಕ್ಲು ಸರಕಾರಿ ಜೂನಿಯರ್ ಕಾಲೇಜಿನ ಅಧ್ಯಕ್ಷ ಕರವಂಡ ಲವ ನಾಣಯ್ಯ, ಬಂಟರ ಸಂಘದ ಜಿಲ್ಲಾಧ್ಯಕ್ಷ ಬಿ.ಡಿ. ನಾರಾಯಣ ರೈ, ನಾಪೋಕ್ಲು ಭಜರಂಗದಳದ ಅಧ್ಯಕ್ಷ ಬಿ.ಎಂ. ಪ್ರತೀಪ್, ಎಸ್‍ಎನ್‍ಡಿಪಿ ನಾಪೋಕ್ಲು ಶಾಖೆಯ ಮಾಜಿ ಅಧ್ಯಕ್ಷ ಎ.ಕೆ. ಚಂದ್ರನ್ ಪಾಲ್ಗೊಳ್ಳಲಿರುವರು ಎಂದು ಮಾಹಿತಿ ನೀಡಿದರು.

ಅಂದು ಸಂಜೆ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಪಿ.ವಿ.ರವಿ ಮತ್ತು ಸಂಗಡಿಗರಿಂದ ರಸಮಂಜರಿ ಕಾರ್ಯಕ್ರಮ ಜರುಗಲಿದೆ ಎಂದು ರಾಜೀವನ್ ಮಾಹಿತಿ ನೀಡಿದರು.

ಸಭೆಯಲ್ಲಿ ಎಸ್‍ಎನ್‍ಡಿಪಿ ನಾಪೋಕ್ಲು ಶಾಖೆಯ ಉಪಾಧ್ಯಕ್ಷ ಟಿ.ಆರ್. ಮಣಿ, ಕಾರ್ಯದರ್ಶಿ ಟಿ.ಕೆ. ರಾಘವ, ಎಸ್‍ಎನ್‍ಡಿಪಿ ಕೊಡಗು ಯೂನಿಯನ್ ನಿರ್ದೇಶಕ ಟಿ.ಎ. ಮಿಟ್ಟು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.