ಮಡಿಕೇರಿ, ಅ. 31: ಮಡಿಕೇರಿಯ ಭಟ್ಕಳ್ ಹಾಗೂ ಎಂ.ಎಂ. ಮಸೀದಿ ಸೇರಿದಂತೆ ಜಿಲ್ಲೆಯ 45ಕ್ಕೂ ಅಧಿಕ ಜಮಾ ಅತ್ಗಳ ಖಾಝಿಯಾಗಿದ್ದ ಹಿರಿಯ ವಿದ್ವಾಂಸ, ಪೂಕಳಂ ಅಬ್ದುಲ್ಲ ಮುಸ್ಲಿಯಾರ್ (85) ಅವರು ತಾ 31 ರಂದು ವಿಧಿವಶರಾದರು. ಪತ್ನಿ, ಆರು ಪುತ್ರರು ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ. ತಾ 1 ರಂದು (ಇಂದು) ಬೆಳಿಗ್ಗೆ 9 ಗಂಟೆಗೆ ಕೇರಳದ ಕಾಞಂಗಾಡಿನ ನರಙÁಡಿಯಲ್ಲಿ ನಡೆಯಲಿದೆ. ಮೃತರ ಸ್ಮರಣಾರ್ಥ ಶುಕ್ರವಾರ ಜುಮಾ ನಮಾಝಿನ ಬಳಿಕ ಜಿಲ್ಲೆಯ ಎಲ್ಲಾ ಮಸೀದಿಗಳಲ್ಲಿ ಮಯ್ಯಿತ್ ನಮಾಝ್ ನಿರ್ವಹಿಸುವಂತೆ ನಗರದ ಎಂ.ಎಂ. ಮಸೀದಿಯ ಧರ್ಮಗುರು ಹಮೀದ್ ಮದನಿ ಕರೆ ನೀಡಿದ್ದಾರೆ.