ಸೋಮವಾರಪೇಟೆ,ಅ. 30: ಜಿಲ್ಲಾ ಹಾಗೂ ಮೂರು ತಾಲೂಕು ಯುವ ಒಕ್ಕೂಟಗಳು ಮತ್ತು ಕಿರಗಂದೂರು ಪ್ರಕೃತಿ ಯುವತಿ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಕೊಡವ ಸಮಾಜದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಯುವಜನೋತ್ಸವದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಜಾನಪದ ಗೀತೆ ಸ್ಪರ್ಧೆಯಲ್ಲಿ ಸೋಮವಾರಪೇಟೆ ಗಂಧರ್ವ ಯುವಕ ಸಂಘ ಪ್ರಥಮ ಸ್ಥಾನ ಪಡೆಯಿತು. ಸೋಮವಾರಪೇಟೆ ವಿಶ್ವಮಾನವ ಕುವೆಂಪು ಶಾಲೆ ದ್ವಿತೀಯ, ವೀರಾಜಪೇಟೆ ನಿಸರ್ಗ ಯುವತಿ ಮಂಡಳಿ ತೃತೀಯ ಸ್ಥಾನ ಗಳಿಸಿತು. ಜಾನಪದ ನೃತ್ಯ ಸ್ಪರ್ಧೆಯಲ್ಲಿ ವಿಶ್ವಮಾನವ ಕುವೆಂಪು ಶಾಲೆ (ಪ್ರ), ಬಸವನಹಳ್ಳಿ ಮೊರಾರ್ಜಿ ವಸತಿ ಶಾಲೆ (ದ್ವಿ), ಶಾಸ್ತ್ರೀಯ ಗಾಯನ, ಶಾಸ್ತ್ರೀಯ ವಾದನ, ತಬಲ ವಾದನ, ಮೃದಂಗದ ಮೂರು ವಿಭಾಗದಲ್ಲೂ ಚಂದನ್ ನೆಲ್ಲಿತ್ತಾಯ (ಪ್ರ), ಗಿಟಾರ್‍ನಲ್ಲಿ ದೀಕ್ಷಿತ್ ನೆಲ್ಲಿತ್ತಾಯ (ಪ್ರ), ಮಣಿಪುರಿ ನೃತ್ಯ ಹಾಗೂ ಒಡಿಸ್ಸಿಯಲ್ಲಿ ನಮಿತ ಶೆಣೈ (ಪ್ರ), ಕಥಕ್‍ನಲ್ಲಿ ಹರ್ಷಕೀರ್ತಿ (ಪ್ರ), ಮಂಜು ಭಾರ್ಗವಿ (ದ್ವಿ), ಶ್ವೇತಾ (ತೃ), ಕೂಚುಪುಡಿಯಲ್ಲಿ ಮಂಜು ಭಾರ್ಗವಿ (ಪ್ರ), ಸಮೀಕ್ಷಾ (ದ್ವಿ), ಭರತ ನಾಟ್ಯದಲ್ಲಿ ಹರ್ಷಕೀರ್ತಿ (ಪ್ರ), ಮಂಜುಭಾರ್ಗವಿ (ದ್ವಿ), ಕಾವ್ಯಶ್ರೀ (ತೃ), ಆಶುಭಾಷಣ ಸ್ಪರ್ಧೆಯಲ್ಲಿ ಕಾವ್ಯಶ್ರೀ (ಪ್ರ), ಶ್ವೇತಾ (ದ್ವಿ), ಹರ್ಷಿತ (ತೃ) ಸ್ಥಾನವನ್ನು ಗಳಿಸಿದರು. ಯುವ ಜನೋತ್ಸವದ ಸಮಾರೋಪ ಸಮಾರಂಭದಲ್ಲಿ ಜಿ.ಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಬಹುಮಾನ ವಿತರಿಸಿದರು. ವೇದಿಕೆಯಲ್ಲಿ ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ. ಸುಕುಮಾರ್, ಯುವ ಒಕ್ಕೂಟದ ತಾಲೂಕು ಅಧ್ಯಕ್ಷೆ ಚಂದ್ರಿಕಾ ಗಣಪತಿ, ತಾ.ಪಂ. ಸದಸ್ಯೆ ಹೆಚ್.ಎನ್. ತಂಗಮ್ಮ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಡಿ. ವಿಜೇತ್, ಜಿಲ್ಲಾ ಯುವ ಒಕ್ಕೂಟದ ಮಾಜಿ ಅಧ್ಯಕ್ಷ ಗಣಪತಿ, ವೀರಾಜಪೇಟೆ ತಾಲೂಕು ಒಕ್ಕೂಟದ ಅಧ್ಯಕ್ಷೆ ಶೀಲಾ ಬೋಪಣ್ಣ, ಕಿರಗಂದೂರು ಗ್ರಾ.ಪಂ. ಸದಸ್ಯರಾದ ಸುಜಾತ, ಭರತ್ ಇದ್ದರು. ಶಿಕ್ಷಕ ಸತೀಶ್ ಕಾರ್ಯಕ್ರಮ ನಿರ್ವಹಿಸಿದರು.