ಮಡಿಕೇರಿ, ಅ. 30: ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ ಗುತ್ತಿಗೆ ಆಧಾರದಲ್ಲಿ ಜಿಲ್ಲಾ ಕಾರ್ಯಕ್ರಮ ಸಹಾಯಕರ ಹುದ್ದೆಗೆ 18 ರಿಂದ 35 ವರ್ಷ ವಯೋಮಿತಿಗೊಳಪಟ್ಟ ಅರ್ಹ ಪುರುಷ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಸಮಾಜ ವಿಜ್ಞಾನ, ಸಮಾಜ ಕಾರ್ಯ, ರೂರಲ್ ಮ್ಯಾನೇಜ್‍ಮೆಂಟ್, ಸಂಖ್ಯಾಶಾಸ್ತ್ರ ಇವುಗಳಲ್ಲಿ ಯಾವದಾದರೊಂದು ಪದವಿ ಪಡೆದಿರಬೇಕು. ಸರ್ಕಾರಿ, ಸ್ವಯಂ ಸೇವಾ ಸಂಸ್ಥೆಗಳಲ್ಲಿ ಕನಿಷ್ಟ 1 ವರ್ಷಗಳ ಅನುಭವ ಹೊಂದಿರಬೇಕು. ಡಾಟಾ ಎಂಟ್ರಿ, ಎಂ.ಎಸ್. ಆಫೀಸ್ ಬಳಕೆಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು. ಮಾಹೆಯಾನ ರೂ. 20 ಸಾವಿರ ಗೌರವ ಧನ ನೀಡಲಾಗುವದು.
ಹೆಚ್ಚಿನ ಮಾಹಿತಿಗೆ ದೂ.ಸಂ. 08272-298379 ಅನ್ನು ಸಂಪರ್ಕಿಸಬಹುದು.