ಮಡಿಕೇರಿ, ಅ. 30: ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಕಲಾವಿದರು ಮಾಶಾಸನ ಆಯ್ಕೆ ಸಮಿತಿಯ ಸದಸ್ಯರನ್ನಾಗಿ ಜಿಲ್ಲೆಯ ಎಂ.ಕೆ. ಜಯಕುಮಾರ್ ಆಯ್ಕೆಯಾಗಿದ್ದಾರೆ. ರಾಜ್ಯದ ಒಟ್ಟು 9 ಮಂದಿ ಸದಸ್ಯರ ಪೈಕಿ ಜಿಲ್ಲೆಯಿಂದ ಜಯಕುಮಾರ್ ಅವರನ್ನು ಪ್ರವಾಸೋದ್ಯಮ ಇಲಾಖೆ ನೇಮಕ ಮಾಡಿ ಆದೇಶಿಸಿದೆ. ಜಯಕುಮಾರ್ ಅಖಿಲ ಭಾರತೀಯ ಸಾಹಿತ್ಯ ಪರಿಷದ್‍ನ ಜಿಲ್ಲಾ ಸಂಯೋಜಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.