ಸೋಮವಾರಪೇಟೆ, ಅ. 30: ಶಿವಮೊಗ್ಗ ಜಿಲ್ಲೆಯ ನೆಹರು ಸ್ಟೇಡಿಯಂನಲ್ಲಿ ನಡೆದ ಪದವಿ ಪೂರ್ವ ಶಿಕ್ಷಣ ಇಲಾಖೆಯ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ರಿಲೇ ಸ್ಪರ್ಧೆಯಲ್ಲಿ ಬೆಂಗಳೂರಿನ “ಶ್ರೀಗಂಧ ಕವಲು” ಕಾಲೇಜಿನ ವಿದ್ಯಾರ್ಥಿನಿ, ಕೂತಿ ಗ್ರಾಮದ ಸಿ.ಎಂ.ರಾಶಿ, 3000 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕದೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ.
ಈಕೆ ಬೆಂಗಳೂರಿನ ಸಾಯಿ ಕ್ರೀಡಾ ವಸತಿ ಗೃಹದಲ್ಲಿ ಅಭ್ಯಾಸ ಮಾಡುತ್ತಿದ್ದು ದೈಹಿಕ ಶಿಕ್ಷಕರಾದ ಸತೀಶ್ ಹಾಗೂ ಸಿದ್ದುರವರಿಂದ ತರಬೇತಿ ಪಡೆಯುತ್ತಿದ್ದಾಳೆ. ಈಕೆ ಕೂತಿ ಗ್ರಾಮದ ಮಂಜುನಾಥ್ ಹಾಗೂ ಪರಿಮಳ ದಂಪತಿಯ ಪುತ್ರಿ.