ಕುಶಾಲನಗರ, ಅ. 29: ಸಂಸ್ಕøತಿ, ಆಚಾರ ವಿಚಾರಗಳ ಬಗ್ಗೆ ಯುವ ಪೀಳಿಗೆಗೆ ಅರಿವು ಮೂಡಿಸುವ ಕಾರ್ಯ ಸಮಾಜಗಳ ಮೂಲಕ ನಡೆಯಬೇಕಿದೆ ಎಂದು ಜಿಪಂ ಮಾಜಿ ಅಧ್ಯಕ್ಷರಾದ ವಿ.ಎಂ.ವಿಜಯ ತಿಳಿಸಿದ್ದಾರೆ.
ಅವರು ಕುಶಾಲನಗರ ಕೇರಳ ಸಮಾಜದ ವತಿಯಿಂದ ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆದ 19ನೇ ವರ್ಷದ ಓಣಂ ಆಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಸಮುದಾಯದ ಜನರು ಒಂದೆಡೆ ಸೇರಿ ಹಬ್ಬಗಳನ್ನು ಆಚರಣೆ ಮಾಡುವ ಮೂಲಕ ಸಂಸ್ಕøತಿಯ ಉಳಿವು ಸಾಧ್ಯ ಎಂದರು.
ಕುಶಾಲನಗರ ಕೇರಳ ಸಮಾಜದ ಅಧ್ಯಕ್ಷರಾದ ಕೆ.ಆರ್. ಶಿವಾನಂದನ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕುಶಾಲನಗರ ಪಪಂ ಸದಸ್ಯೆ ಜಯಲಕ್ಷ್ಮಿ ಚಂದ್ರ, ಸಮಾಜದ ಉಪಾಧ್ಯಕ್ಷ ಎನ್.ಜಿ. ಪ್ರಕಾಶ್, ಕಾರ್ಯದರ್ಶಿ ಕೆ.ಜೆ. ರಾಬಿನ್, ಖಜಾಂಚಿ ಬಿ.ಸಿ. ಆನಂದ್, ಉದ್ಯಮಿಗಳಾದ ಲಕ್ಷ್ಮಣ, ಬಾಬು, ಥಾಮಸ್, ಸಮಾಜದ ಮಾಜಿ ಅಧ್ಯಕ್ಷರುಗಳಾದ ಐ.ಡಿ.ರಾಯ್ ಹಾಗೂ ಪದಾಧಿಕಾರಿಗಳು ಇದ್ದರು.
ಕಾರ್ಯಕ್ರಮಕ್ಕೆ ಬಲಿ ಚಕ್ರವರ್ತಿಯ ವೇಷಧಾರಿಯನ್ನು ಸಾಂಪ್ರದಾಯಿಕವಾಗಿ ಬರಮಾಡಿಕೊಳ್ಳಲಾಯಿತು.
ನಂತರ ಸಮುದಾಯದ ವಿದ್ಯಾರ್ಥಿಗಳಿಂದ ರಂಗಪೂಜೆ, ನಾಡೋಡಿ ನೃತ್ಯ, ಮೋಹಿನಿ ಆಟಂ ಮತ್ತಿತರ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.