ವೀರಾಜಪೇಟೆ, ಅ. 29: ದಂತ ವೈದ್ಯಕೀಯ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳು ಸಂಶೋಧನೆಗೂ ಆಸಕ್ತಿ ವಹಿಸಬೇಕು. ಸಂಶೋಧನೆ ಯಿಂದ ದಂತ ವೈದ್ಯಕೀಯ ಶಿಕ್ಷಣಕ್ಕೆ ವಿಶೇಷ ಮೆರುಗು ದೊರೆಯಲಿದೆ ಎಂದು ಮಂಗಳೂರು ವಿಶ್ವ ವಿದ್ಯಾಲಯ ಪಿ.ಜಿ. ಸೆಂಟರ್‍ನ ನಿರ್ದೇಶಕಿ ಡಾ. ಮಂಜುಳಾ ಶಾಂತಾರಾಮ್ ತಿಳಿಸಿದರು.

ಕೊಡಗು ದಂತ ವೈದ್ಯಕೀಯ ಕಾಲೇಜಿನ ವತಿಯಿಂದ ಹಮ್ಮಿ ಕೊಂಡಿದ್ದ ವಿದ್ಯಾರ್ಥಿಗಳ “ಸ್ವಾಗತ” ಸಮಾರಂಭದಲ್ಲಿ ಭಾಗವಹಿಸಿದ್ದ ಅವರು, ಕೊಡಗಿನ ಪ್ರಕೃತಿ ಸೌಂದರ್ಯದ ಉತ್ತಮ ಪರಿಸರದ ವಿದ್ಯಾಸಂಸ್ಥೆ ವಿದ್ಯಾರ್ಥಿಗಳಿಗೆ ಉನ್ನತಮಟ್ಟದ ಶಿಕ್ಷಣಕ್ಕಾಗಿ ಎಲ್ಲ ಸೌಲಭ್ಯಗಳನ್ನು ಒದಗಿಸಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೂರ್ಗ್ ಎಜುಕೇಶನ್ ಫಂಡ್‍ನ ಅಧ್ಯಕ್ಷ ಕೆ.ಪಿ. ಉತ್ತಪ್ಪ ಮಾತನಾಡಿ, ದಂತ ವಿದ್ಯಾಲಯ ಅಲ್ಪ ಸಮಯದಲ್ಲಿ ತನ್ನ ಛಾಪು ಮೂಡಿಸಿದೆ ಎಂದು ಹೇಳಿದರು. ವೇದಿಕೆಯಲ್ಲಿ ಕಾಲೇಜಿನ ಡೀನ್ ಡಾ. ಸುನಿಲ್ ಮುದ್ದಯ್ಯ, ಪ್ರಾಂಶುಪಾಲ ಕೆ.ಸಿ. ಪೊನ್ನಪ್ಪ, ಉಪ ಪ್ರಾಂಶುಪಾಲ ಡಾ. ಜಿತೇಶ್ ಜೈನ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ಎಂ. ಕುಶಾಲಪ್ಪ, ಕಾರ್ಯದರ್ಶಿ ಶಬನಮ್ ಶಿರೀನ್ ಹಾಜರಿದ್ದರು. ಡಾ. ಮಂಜುಳಾ ಉದ್ಘಾಟಿಸಿದರು. ಕಾಲೇಜಿನ ವಿದ್ಯಾರ್ಥಿ ಸಂಘಕ್ಕೆ ಆಯ್ಕೆಯಾದ ಜೆ. ಜಯಲಕ್ಷ್ಮಿ, ಸಾಂಸ್ಕøತಿಕ ಘಟಕದ ಕಾರ್ಯದರ್ಶಿ ರೂಪಾಲಿ, ಕ್ರೀಡಾ ಘಟಕದ ಕಾರ್ಯದರ್ಶಿ ಎಸ್. ಚೇತನ್ ಕುಮಾರ್, ಸಮಿತಿ ಸದಸ್ಯರುಗಳಾದ ನೇಹಾ ನಿಜಾರ್, ಮುಸ್ಮಿಲ್ ಮಹಮ್ಮದ್, ಎ.ಎಂ. ಕವನಶ್ರೀ ಹಾಗೂ ಆಲ್ಪೋನ್ಸ್ ಥೋಮಸ್ ಹಾಜರಿದ್ದರು. ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.