ಮಡಿಕೇರಿ, ಅ. 28: ಕೊಡಗು ಮೂಲದ ಹಿರಿಯ ವಕೀಲ ಮಾಳೇಟಿರ ಧ್ಯಾನ್ ಚಿನ್ನಪ್ಪ ಅವರನ್ನು ಹೆಚ್ಚುವರಿ ಅಡ್ವಕೇಟ್ ಜನರಲ್ ಹುದ್ದೆಗೆ ರಾಜ್ಯಪಾಲರ ಆದೇಶದ ಅನುಸಾರ ಕಾನೂನು ಇಲಾಖೆಯ (ಆಡಳಿತ-2), ಸರಕಾರದ ಅಧೀನ ಕಾರ್ಯದರ್ಶಿ ಆದೇಶಿಸಿ ನೇಮಕ ಮಾಡಿದ್ದಾರೆ. ಧಾರವಾಡದ ಅಡ್ವೋಕೇಟ್ ಜನರಲ್ ಹುದ್ದೆಗೆ (ಹೊಸದಾಗಿ ಸೃಜಿಸಲಾಗಿರುವ ಹುದ್ದೆ) ಇವರನ್ನು ನೇಮಕ ಮಾಡಲಾಗಿದೆ. 1998 ರಿಂದ ವಕೀಲರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇವರು ದೇಶದ ವಿವಿಧ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. 1998 ರಲ್ಲಿ ಬೆಂಗಳೂರಿನ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಗಳಿಸಿದ್ದಾರೆ. 2002ರಲ್ಲಿ ಸ್ನಾತಕೋತ್ತರವನ್ನು ಲಂಡನ್ ಕಾಲೇಜಿನಲ್ಲಿ ಸ್ಕಾಲರ್‍ಶಿಪ್‍ನೊಂದಿಗೆ ಪೂರ್ಣಗೊಳಿಸಿದ್ದಾರೆ. ವಾಣಿಜ್ಯ, ಸಾಂವಿಧಾನ, ಬೌದ್ಧಿಕ ಆಸ್ತಿ ಬಗ್ಗೆ ವ್ಯಾಪಕ ಅಧ್ಯಯ ಮಾಡಿರುವ ಇವರು, ಇದರ ಬಗ್ಗೆ ನಿರ್ಣಯ ಕೈಗೊಳ್ಳುವ ಸಾಮಥ್ರ್ಯವನ್ನು ಹೊಂದಿದ್ದಾರೆ. ದೋಹ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸಿದ ಅನುಭವವನ್ನು ಹೊಂದಿರುವ ಇವರು, ತಮ್ಮ ಕಾನೂನು ಪದವಿಯ ಸಂದರ್ಭ ಐದು ವರ್ಷವೂ ರ್ಯಾಂಕ್ ವಿಜೇತರಾಗಿದ್ದಾರೆ. ಇವರು ಎಂ.ಪಿ ಚಿಣ್ಣಪ್ಪ ಹಾಗೂ ಕಾವೇರಿ ಚಿಣ್ಣಪ್ಪ (ತಾಮನೆ-ಅಪ್ಪನೆರವಂಡ) ದಂಪತಿ ಪುತ್ರ. ಇವರ ತಂದೆ ನ್ಯಾಯಾಧೀಶರಾಗಿದ್ದರು.