ಮಡಿಕೇರಿ, ಅ. 28: 2020ರ ಏಪ್ರಿಲ್-ಮೇ ತಿಂಗಳಿನಲ್ಲಿ ಕೊಡವ ಕುಟುಂಬಗಳ ನಡುವೆ ಬಾಳುಗೋಡುವಿನ ಕೊಡವ ಸಾಂಸ್ಕøತಿಕ ಮತ್ತು ಕ್ರೀಡಾ ಸಮುಚ್ಚಯದಲ್ಲಿ ಜರುಗಲಿರುವ 23ನೇ ವರ್ಷದ ಕೌಟುಂಬಿಕ ಹಾಕಿ ಹಬ್ಬ ಮುಕ್ಕಾಟಿರ ಕಪ್‍ನ ಲಾಂಛನ ಬಿಡುಗಡೆ ಸಮಾರಂಭ ನಿನ್ನೆ ಬಾಳುಗೋಡುವಿನಲ್ಲಿ ಜರುಗಿತು.

ಅಲ್ಲಿನ ಸಭಾಂಗಣದಲ್ಲಿ ಆಯೋಜಿತಗೊಂಡಿದ್ದ ಸಮಾರಂಭದಲ್ಲಿ ಪಂದ್ಯಾವಳಿಯ ಲಾಂಛನವನ್ನು ಮುಕ್ಕಾಟಿರ ಕುಟುಂಬದ ಪಟ್ಟೆದಾರ ಸೋಮಯ್ಯ ಆನಾವರಣಗೊಳಿಸಿದರು.Âಈ ಸಂದರ್ಭ ಅತಿಥಿಯಾಗಿದ್ದ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಮಾತನಾಡಿ ಹಾಕಿ ಎಂದರೆ ಕೊಡಗು, ಒಂದೇ ವೇದಿಕೆಯಲ್ಲಿ ಎಲ್ಲಾ ಕುಟುಂಬಗಳು ಒಗ್ಗೂಡಿಕೊಂಡು ಸಂಭ್ರಮಿಸುವ ಹಬ್ಬ ಇದಾಗಿದೆ. ಹಾಕಿ ನಮ್ಮೆಯಲ್ಲಿ ಎಲ್ಲಾ ವಯೋಮಿತಿಯ ಜನರು ಭಾಗವಹಿಸುತ್ತಿರು ವದು ವಿಶೇಷ. ಪಾಂಡಂಡ ಕುಟ್ಟಪ್ಪ ಅವರ ಚಿಂತನೆಯಿಂದ ಇದು ಇಲ್ಲಿಯವರೆಗೆ ನಡೆದು ಬಂದಿದೆ. ಶಿಸ್ತಿನ ನಾಡಿನಲ್ಲಿ ಅಶಿಸ್ತು ಪ್ರದರ್ಶನಕ್ಕೆ ಅವಕಾಶವಿಲ್ಲ. ಸರ್ಕಾರದಿಂದ ಆಗುವ ಕೆಲಸಕ್ಕೆ ಜನಪ್ರತಿನಿಧಿಗಳಾಗಿ ಸಹಕಾರ ನೀಡುತ್ತೇವೆ. ಹಾಕಿ ಉಳಿಯಬೇಕು. ಇದರಿಂದ ಹಲವಾರು ಪ್ರತಿಭೆಗಳು ರಾಜ್ಯ, ರಾಷ್ಟ್ರ ಅಂತರ್ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಹಕಾರಿ ಯಾಗುತ್ತದೆ. ಒಕ್ಕ ಕುಟುಂಬದಲ್ಲಿ ಕೈಮಡ, ಮಂದ್, ಮಾನಿಗಳನ್ನು ಉಳಿಸಿ ಬೆಳೆಸುವ ಕೆಲಸವನ್ನು ಮಾಡಬೇಕು. ಮುಂದಿನ ಬಾರಿ ಅಪ್ಪಚೆಟ್ಟೋಳಂಡ ಕುಟುಂಬ ನಡೆಸುತ್ತಿರುವದು ಶ್ಲಾಘನೀಯ ಎಂದು ಹೇಳಿದರು.

ಮತ್ತೋರ್ವ ಅತಿಥಿ ಮಾಜಿ ಸಚಿವ ಎಚ್. ವಿಶ್ವನಾಥ್ ಮಾತನಾಡಿ ಜಗತ್ತಿನಲ್ಲಿಯೇ ಕೊಡವರು ವಿಭಿನ್ನ, ವಿಶಿಷ್ಟ ಸಂಸ್ಕøತಿ, ಸಂಪ್ರದಾಯ, ಆಚಾರ ವಿಚಾರವನ್ನು ಹೊಂದಿದ ಜನಾಂಗವಾಗಿದೆ. ಸೇನೆಗೆ ಸೇರುವದರೊಂದಿಗೆ ಹಾಕಿ ಆಟವು ರಕ್ತಗತವಾಗಿ ಬಂದಿದೆ. ಬಾಳುಗೋಡು ಸಮಾಜ ನಿರ್ಮಾಣ ಮಾಡಲು ಹಾಲಿ ಹಾಗೂ ಮಾಜಿ ಮುಖ್ಯಂತ್ರಿಗಳ ಕೊಡುಗೆ ಇದೆ. ಬಾಳುಗೋಡು ಹಾಕಿ ಮ್ಯೆದಾನದಲ್ಲಿ ಸ್ಟೇಡಿಯಂ ನಿರ್ಮಾಣ ಮಾಡಲು ಬಜೇಟ್‍ನಲ್ಲಿ 15 ಕೋಟಿ ಮೀಸಲಿಡಲಾಗಿದೆ. ಮುಂದಿನ ದಿನಗಳಲ್ಲಿ ಮಂಜೂರು ಮಾಡಿಸುವ ಹೋಣೆಗಾರಿಕೆಯು ಇದೆ. ಹಿಂದೆ ಲೋಕಸಭಾ ಸದಸ್ಯನಾಗಿ, ಮಂತ್ರಿಯಾಗಿ ಕೊಡಗಿನ ಅಭಿವೃದ್ಧಿಗೆ ಶ್ರಮಿಸಿದ್ದು, ಮುಂದೆಯು ಸಹರಿಸುವದಾಗಿ ಹೇಳಿದರು.(ಮೊದಲ ಪುಟದಿಂದ) ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಮಾತನಾಡಿ ಕಳೆದ ಐದು ವರ್ಷದಿಂದ ಬಾಳುಗೋಡುವಿನಲ್ಲಿ ಕೌಟುಂಬಿಕ ಹಾಕಿ ಪಂದ್ಯಾವಳಿಗಳನ್ನು ನಡೆಸಲು ಪ್ರಯತ್ನ ನಡೆಸಲಾಗಿದೆ. ಮಾದಂಡ ಕುಟುಂಬದ ನಂತರ ಮುಕ್ಕಾಟಿರ ಕುಟುಂಬ ಇಲ್ಲಿ ಪಂದ್ಯಾಟ ನಡೆಸುತ್ತಿರುವದು ಸ್ವಾಗತಾರ್ಹ. ಹಾಕಿ ಪಂದ್ಯಾವಳಿಗೆ ಎಲ್ಲಾ ಕೊಡವ ಸಮಾಜಗಳು ಸಹಕಾರ ನೀಡುವಂತೆ ಮನವಿ ಮಾಡಲಾಗಿದೆ. ಬಾಳುಗೋಡು ಸಮಾಜ ನಿರ್ಮಾಣಕ್ಕೆ ಸರಕಾರದಿಂದ 5 ಕೋಟಿ ನೆರವು ದೊರೆತಿದೆ. ಮುಂದಿನ ಬಾರಿ ಅಪ್ಪಚೆಟ್ಟೋಳಂಡ ಕುಟುಂಬದವರು ಕೂಡ ಇಲ್ಲಿಯೇ ಪಂದ್ಯಾಟವನ್ನು ನಡೆಸಿದರೆ ಎಲ್ಲಾ ರೀತಿಯ ಸಹಕಾರ ನೀಡಲಾಗುವದು ಎಂದು ಹೇಳಿದರು.

ಪಂದ್ಯಾವಳಿ ಅಧ್ಯಕ್ಷ ಮುಕ್ಕಾಟ್ಟಿರ ಉತ್ತಯ್ಯ ಮಾತನಾಡಿ ಹರಿಹರ ಹಾಗೂ ಬೆಳ್ಳೂರು ಮುಕ್ಕಾಟ್ಟಿರ ಎರಡು ಊರಿನವರು ಕೂಡ ಒಂದೇ ಕುಟುಂಬದವರು. ಹರಿಹರದಲ್ಲಿ 4 ಅಜ್ಜಂದಿರು ಹಾಗೂ ಬೆಳ್ಳೂರಿನಲ್ಲಿ 2 ಅಜ್ಜಂದಿರು ನೆಲೆಸಿದ್ದಾರೆ. ಕೊಡವರು ಪ್ರಕೃತಿ ಆರಾದಕರು. ಕುಟುಂಬದ ಹಿರಿಯರೆ ನಮಗೆ ಗುರುಕಾರಣರು. ಇದೀಗ ಕುಟುಂಬ ಯೋಜನೆಯಿಂದ ಕೊಡವರ ಸಂಖ್ಯೆ ಕ್ಷೀಣಿಸುತ್ತಿದೆ. ಇವರುಗಳು ಕೂಡ ಮೈಸೂರು, ಬೆಂಗಳೂರು ಅಂದುಕೊಂಡು ಹೊರ ಜಿಲ್ಲೆ ರಾಜ್ಯಗಳಲ್ಲಿ ನೆಲೆಸಿದ್ದಾರೆ. ಹಾಕಿ ಪಂದ್ಯಾವಳಿಗಳಿಂದ ಕುಟುಂಬದಲ್ಲಿ ಒಗ್ಗಟ್ಟು-ಸಾಮರಸ್ಯ ಮನೆಮಾಡಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಕೊಡವ ಹಾಕಿ ಅಕಾಡೆಮಿ ಕಾರ್ಯಾಧ್ಯಕ್ಷ ಕಾಳೇಂಗಡ ರಮೇಶ್, ಅಂತರ್ರಾಷ್ಟ್ರೀಯ ಹಾಕಿ ತೀರ್ಪುಗಾರ ಅಚ್ಚಕಾಳಿರ ಪಳಂಗಪ್ಪ, ಜಿಲ್ಲಾ ಪಂಚಾಯತ್ ಸದಸ್ಯರಾದ ಸರಿತಾ ಪೂಣಚ್ಚ, ಬಾನಂಡ ಪ್ರಥ್ಯು, ಮೂಕೊಂಡ ವಿಜು ಸುಬ್ರಮಣಿ, ಪಂದ್ಯಾಟದ ಕಾರ್ಯಾಧ್ಯಕ್ಷ ರೋಹಿತ್ ಸುಬ್ಬಯ್ಯ, ಶಿವು ಮಾದಪ್ಪ ಉಪಸ್ಥಿತರಿದ್ದರು.