ಗುಡ್ಡೆಹೊಸೂರು, ಅ. 28: ಗುಡ್ಡೆಹೊಸೂರು ಸುತ್ತಮುತ್ತಲಿನಲ್ಲಿ ಆರೋಗ್ಯ ಇಲಾಖೆಯವರ ತಂಡ ಅಂಗಡಿಗಳಿಗೆ ದಾಳಿ ನಡೆಸಿ ಬೀಡಿ, ಸಿಗರೇಟ್ ಮತ್ತು ಇತರ ಪಾನ್ ಪದಾರ್ಥಗಳನ್ನು ಚಿಲ್ಲರೆಯಾಗಿ ವ್ಯಾಪಾರ ನಡೆಸುತ್ತಿದ್ದವರಿಗೆ ದಂಡ ವಿಧಿಸಲಾಯಿತು. ಅಲ್ಲದೆ ಸಾರ್ವಜನಿಕರಿಗೆ ಅರಿವು ನೀಡುವ ಕಾರ್ಯ ನಡೆಯಿತು. ಅಂಗಡಿ ಮುಂದೆ ಧೂಮಪಾನ ನಿಷೇಧಿತ ಸ್ಥಳ ಎಂಬ ನಾಮಫಲಕ ಅಳವಡಿಸುವಂತೆ ಈ ಸಂದರ್ಭ ತಿಳಿಸಿದರು. ಆರೋಗ್ಯ ಇಲಾಖೆಯ ಪುನಿತಾರಾಣಿ, ಮಂಜುನಾಥ್ ಮತ್ತು ಆರೋಗ್ಯ ನಿರೀಕ್ಷಕರಾದ ಲೋಕೇಶ್, ಚಂದ್ರೇಶ್, ಮುಖೇಶ್ ಮತ್ತು ಕುಶಾಲನಗರ ಗ್ರಾಮಾಂತರ ಠಾಣಾ ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.