ಕೂಡಿಗೆ, ಅ. 28 : ಶಿರಂಗಾಲದ ಸರಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದಲ್ಲಿ ಕುಶಾಲನಗರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಡಿ. ರಂಗಸ್ವಾಮಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದರು.

ಕುಶಾಲನಗರ ತಾಲೂಕು ಘಟಕದ ಗೌರವ ಕಾರ್ಯದರ್ಶಿ ಎನ್.ಆರ್. ನಾಗೇಶ್ ಕಾವೇರಿ ಮಾತೆಯ ಕವನ ವಾಚನ ಮಾಡಿದರು. ವೇದಿಕೆಯಲ್ಲಿ ಗೌರವ ಕಾರ್ಯದರ್ಶಿ ಹರೀಶ್ ಕುಶಾಲನಗರದ ಉದ್ಯಮಿ ಯೋಗೇಶ್ ನಿವೃತ್ತ ಶಿರಸ್ತೆದಾರರಾದ ಎಸ್. ಕೆ. ರಾಜು, ಶಿಬಿರಾಧಿಕಾರಿಗಳಾದ ಸಿಎಸ್ ಹೇಮಲತಾ ಸಹ ಶಿಬಿರಾಧಿಕಾರಿ ವೆಂಕಟೇಶ್ ಗಣೇಶ್ ಮೊದಲಾದವರು ವೇದಿಕೆಯಲ್ಲಿದ್ದರು. ಅಧ್ಯಕ್ಷತೆಯನ್ನು ಪ್ರಾಂಶುಪಾಲ ಹಂಡ್ರಂಗಿ ನಾಗರಾಜ್ ವಹಿಸಿದ್ದರು ಕಾರ್ಯಕ್ರಮವನ್ನು ತುಂಗಭದ್ರಾ ತಂಡ ಮತ್ತು ಕೃಷ್ಣ ತಂಡ ಜಂಟಿಯಾಗಿ ನಡೆಸಿಕೊಟ್ಟರು.