ಮಡಿಕೇರಿ, ಅ. 28: ಕನ್ನಡ ರಾಜ್ಯೋತ್ಸವದ ಅಂಗವಾಗಿ ವೀರಾಜಪೇಟೆಯ ರೋಟರಿ ಕ್ಲಬ್ ವತಿಯಿಂದ ಮೈಸೂರು ಅಪೋಲೋ ಜೆಎಸ್‍ಎಸ್ ಆಸ್ಪತ್ರೆಯ ಸಹಯೋಗದಲ್ಲಿ ನ. 1ರಂದು ಹೃದಯ ತಪಾಸಣಾ ಉಚಿತ ಶಿಬಿರ ಆಯೋಜಿಸಲಾಗಿದೆ.

ನ. 1 ರಂದು ಶುಕ್ರವಾರ ವೀರಾಜಪೇಟೆಯ ಮಹಿಳಾ ಸಮಾಜ ಬಳಿಯಲ್ಲಿನ ರೋಟರಿ ಸಭಾಂಗಣದಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಹೃದಯ ತಪಾಸಣೆಯನ್ನು ಉಚಿತವಾಗಿ ಕೈಗೊಳ್ಳಲಾಗಿದೆ.

ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗೆ ರಾಕೇಶ್‍ಉತ್ತಪ್ಪ 9880929143, ಆದಿತ್ಯ 9731121119 ಅವರನ್ನು ಸಂಪರ್ಕಿಸಬಹುದಾಗಿದೆ.