ಗೋಣಿಕೊಪ್ಪ ವರದಿ, ಅ. 28: ಕುರ್ಚಿ ಗ್ರಾಮದಲ್ಲಿ ಹುಲಿ ಹೆಜ್ಜೆ ಪತ್ತೆಯಾಗಿದ್ದು, ಗ್ರಾಮದಲ್ಲಿ ಭಯದ ವಾತಾವರಣ ಉಂಟಾಗಿದೆ.
ಅಲ್ಲಿನ ಅಜ್ಜಮಾಡ ಕುಶಾಲಪ್ಪ ಅವರಿಗೆ ಸೇರಿದ ಗದ್ದೆ, ತೋಟದಲ್ಲಿ ಹುಲಿ ನಡೆದಾಡಿರುವ ಬಗ್ಗೆ ಗುರುತು ಪತ್ತೆಯಾಗಿದೆ. ಕೊಟ್ಟಿಗೆವರೆಗೂ ಬಂದಿರುವ ಹುಲಿ ವಾಪಸ್ ತೆರಳಿದೆ. ಕೊಟ್ಟಿಗೆ ಸಮೀಪ ಕಾರ್ಮಿಕರ ಮನೆ ಇರುವದರಿಂದ ಜನರು ಇದ್ದ ಕಾರಣ ಹಿಂದೆ ತೆರಳಿರಬಹುದು ಎಂದು ಊಹಿಸಲಾಗಿದೆ. ಈ ಬಗ್ಗೆ ಸ್ಥಳೀಯ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಕ್ರಮಕ್ಕೆ ಮುಂದಾಗಿದೆ.