ಗೋಣಿಕೊಪ್ಪಲು, ಅ. 28: ಗೋಣಿಕೊಪ್ಪ ವೃತ್ತ ನಿರೀಕ್ಷಕರಾಗಿ ಎನ್.ಎನ್. ರಾಮರೆಡ್ಡಿ ನೇಮಕಗೊಂಡಿದ್ದು ಅಧಿಕಾರ ಸ್ವೀಕರಿಸಿದ್ದಾರೆ. ಈ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ದಿವಾಕರ್ ಅವರು ಮಡಿಕೇರಿ ವಿಭಾಗಕ್ಕೆ ವರ್ಗಾವಣೆ ಗೊಂಡಿದ್ದಾರೆ.

ಎನ್.ಎನ್. ರಾಮರೆಡ್ಡಿ ಅವರು ಈ ಹಿಂದೆ ಮಡಿಕೇರಿ ಗ್ರಾಮಾಂತರ, ಸುಂಟಿಕೊಪ್ಪ, ಹಾಸನ, ಪೊನ್ನಂಪೇಟೆ, ಸಿದ್ದಾಪುರ ಠಾಣೆಯಲ್ಲಿ ಠಾಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, ಗೋಣಿಕೊಪ್ಪ ಠಾಣೆಗೆ ವೃತ್ತ ನಿರೀಕ್ಷಕರಾಗಿ ಮುಂಬಡ್ತಿ ಪಡೆದು ಕೆಜಿಎಫ್, ಮುಳಬಾಗಿಲು, ರಾಜಾಜಿನಗರ ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿದ್ದರು. ಇದೀಗ ಇವರು ಗೋಣಿಕೊಪ್ಪ ವೃತ್ತಕ್ಕೆ ವೃತ್ತ ನಿರೀಕ್ಷಕರಾಗಿ ನೇಮಕಗೊಂಡಿದ್ದಾರೆ.