ಗುಡ್ಡೆಹೊಸೂರು, ಅ. 28: ಇಲ್ಲಿಗೆ ಸಮೀಪದ ಬಸವನಹಳ್ಳಿ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಸಂಘ ರಚನೆ ಮಾಡಲಾಯಿತು. ಎಸ್.ಡಿ.ಎಂ.ಸಿ. ಅಧ್ಯಕ್ಷ ಪುರುಷೋತ್ತಮ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಲೋಕೇಶ್ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕ ಲಕ್ಷ್ಮಣ್ ಪ್ರಾಸ್ತಾವಿಕ ನುಡಿಯಾಡಿದರು. ಸಂಘದ ಅಧ್ಯಕ್ಷರಾಗಿ ಸಾಜುದ್ದೀನ್, ಉಪಾಧ್ಯಕ್ಷರಾಗಿ ರಾಜೇಶ್, ಖಜಾಂಚಿಯಾಗಿ ಗಣೇಶ್ ಬಿ.ಡಿ., ಕಾರ್ಯದರ್ಶಿಯಾಗಿ ಅರುಣ್ ಎಸ್. ಸಂಘಟನಾ ಕಾರ್ಯದರ್ಶಿಯಾಗಿ ರಾಬರ್ಟ್ ಕೆ. ಇವರುಗಳು ಆಯ್ಕೆಯಾದರು. ನಿರ್ದೇಶಕರಾಗಿ ಬಾಲಕೃಷ್ಣ, ಸುನಿಲ್‍ಕುಮಾರ್ ಪಿ.ಎಸ್., ವಿನೋದ್‍ಸಿ.ಆರ್., ಮಂಜುನಾಥ್, ಡಾಟಿ ಎ.ಪಿ. ಅವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭ ಮುಖ್ಯ ಶಿಕ್ಷಕ ಕೃಷ್ಣನಾಯ್ಕ, ಸಹಶಿಕ್ಷಕರಾದ ವೆಂಕಟೇಶ್, ಶ್ರೀನಿವಾಸ ನಾಯ್ಕ ಮತ್ತು ಹಳೆ ವಿದ್ಯಾರ್ಥಿಗಳು ಹಾಜರಿದ್ದರು.