ಗೋಣಿಕೊಪ್ಪ ವರದಿ, ಅ. 28 ; ಅರ್ವತೋಕ್ಲು ಸರ್ವದೈವತಾ ಕಾಲೇಜಿನ ವಿದ್ಯಾರ್ಥಿ ಪಿ.ಎಂ. ನವೀನ್ ಬಾಲ್ ಬಾಡ್ಮಿಂಟನ್‍ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ದ್ದಾರೆ. ಇತ್ತೀಚೆಗೆ ಕಲಬುರ್ಗಿಯಲ್ಲಿ ಆಯೋಜಿಸಿದ್ದ ಪದವಿಪೂರ್ವ ಕಾಲೇಜು ಬಾಲ್ ಬಾಡ್ಮಿಂಟನ್ ಕ್ರೀಡೆಯಲ್ಲಿ ಮೈಸೂರು ವಲಯವನ್ನು ಪ್ರತಿನಿಧಿಸಿದ್ದ ಇವರ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದ್ದು, ರಾಷ್ಟ್ರಮಟ್ಟಕ್ಕೆ ಆಯ್ಕೆಯಾದರು. ಇವರು ಗೋಣಿಕೊಪ್ಪದ ಮನೋಜ್, ಪುಷ್ಪ ದಂಪತಿ ಪುತ್ರ.