ಮಡಿಕೇರಿ, ಅ. 28: ಕೊಡಗು ಜಿಲ್ಲೆಯಲ್ಲಿ ಹನ್ನೆರಡು ವರ್ಷಗಳ ಹಿಂದೆ ಕೇಂದ್ರ ಹಾಗೂ ರಾಜ್ಯ ಸರಕಾರಿ ಉದ್ಯೋಗಿಗಳ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕಾಗಿ ಸ್ಥಾಪನೆ ಗೊಂಡಿರುವ ಇಲ್ಲಿನ ಕೇಂದ್ರೀಯ ವಿದ್ಯಾಲಯ ಪ್ರಸಕ್ತ ಸ್ವಂತ ಕಟ್ಟಡ ದೊಂದಿಗೆ, ವಿದ್ಯಾರ್ಥಿಗಳಿಗೆ ಕ್ರಿಯಾ ಶೀಲತೆಯ ಚಟುವಟಿಕೆ ಮುಖಾಂತರ ರಾಷ್ಟ್ರೀಯ ಮೌಲ್ಯಗಳಿಗೆ ಒತ್ತು ನೀಡಿ ಕಲಿಕೆ ಮುಂದುವರೆಸಿದೆ.ಪ್ರಸಕ್ತ ಮಡಿಕೇರಿಯ ವಿದ್ಯಾನಗರದಲ್ಲಿ ಕೇಂದ್ರ ಸರಕಾರದ ರೂ. 12.67 ಕೋಟಿ ವೆಚ್ಚದ ಅನುದಾನದಿಂದ ವಿಶಾಲ ಆವರಣ ದಲ್ಲಿ ಶಾಲಾ ಕೊಠಡಿ ಗಳೊಂದಿಗೆ ಶಿಕ್ಷಕ ವೃಂದಕ್ಕೆ ವಸತಿ ಸಹಿತ ಎಲ್ಲ ಮೂಲಭೂತ ಸೌಕರ್ಯಗಳಿಂದ ಕೂಡಿದ ತರಗತಿಗಳನ್ನು ನಡೆಸ ಲಾಗುತ್ತಿದೆ. ಇಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಿ ಉದ್ಯೋಗಿಗಳ ಮಕ್ಕಳಲ್ಲದೆ ಹೆಚ್ಚುವರಿ ಸೀಟುಗಳನ್ನು ಕೊಡಗಿನ ವರ್ತಕ ಸಮೂಹ ಸ್ವಾಯತ್ತ ಸಂಸ್ಥೆ ಉದ್ಯೋಗಿಗಳ ಮಕ್ಕಳು ಮತ್ತಿತರ ಪೋಷಕರ ಮಕ್ಕಳಿಗೂ ಕಲ್ಪಿಸಲಾಗಿದೆ.ಕೇಂದ್ರ ಲೋಕೋಪಯೋಗಿ ಇಲಾಖೆಯ ನುರಿತ ಇಂಜಿನಿಯರ್ ಗಳ ತಾಂತ್ರಿಕ ಸಲಹೆಯಡಿ, ಮಂಗಳೂರು ಮೂಲದ ಗೋವರ್ಧನ್ ಬಿಲ್ಡರ್ಸ್ ಈ ವಿದ್ಯಾಲಯ ಕಟ್ಟಡ ನಿರ್ಮಿಸಿದ್ದು, ಪ್ರಸಕ್ತ ಶೈಕ್ಷಣಿಕ ಚಟುವಟಿಕೆಯು ಈಗಾಗಲೇ ನೂತನ ವಿದ್ಯಾಲಯ ಸಂಕೀರ್ಣ ದಲ್ಲಿ ಪ್ರಾರಂಭ ಗೊಂಡಿದೆ.
ಸುಸಜ್ಜಿತ ವ್ಯವಸ್ಥೆ: ಒಂದೊಮ್ಮೆ ನಗರದ ಸರಕಾರಿ ಶಾಲೆ ಆವರಣದಲ್ಲಿ ಹಾಗೂ
(ಮೊದಲ ಪುಟದಿಂದ) ಆನಂತರ ಸುದರ್ಶನ ವೃತ್ತ ಬಳಿ ರಾಜ್ಯ ಸರಕಾರಿ ಕಟ್ಟಡವೊಂದರಲ್ಲಿ ಇತ್ತೀಚಿನ ದಿನಗಳ ತನಕ ಈ ವಿದ್ಯಾಲಯದ ಚಟುವಟಿಕೆ ಕಿಷ್ಕಿಂದೆಯಲ್ಲಿ ಮುಂದುವರಿದಿದ್ದು, 12 ವರ್ಷಗಳಿಂದ ಅನೇಕ ಸಮಸ್ಯೆಗಳನ್ನು ಎದುರಿಸಿ ಈಗಾಗಲೇ ಸುಸಜ್ಜಿತ ವ್ಯವಸ್ಥೆಯಡಿ, ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ ಎಂದು ಪ್ರಾಂಶುಪಾಲ ಅರ್ಜುನ್ ಸಿಂಗ್ ಹರ್ಷ ವ್ಯಕ್ತಪಡಿಸಿದರು.
ರಾಷ್ಟ್ರೀಯತೆಗೆ ಒತ್ತು: ಕೇಂದ್ರೀಯ ವಿದ್ಯಾಲಯದಲ್ಲಿ ಹಿಂದಿ, ಇಂಗ್ಲೀಷ್, ಸಂಸ್ಕøತದೊಂದಿಗೆ ಆಸಕ್ತ ಮಕ್ಕಳು ಪ್ರಾಥಮಿಕ ಹಂತದಲ್ಲಿ ಕನ್ನಡ ಕಲಿಯುತ್ತಿದ್ದು, ಇಲ್ಲಿ ಮುಖ್ಯವಾಗಿ ರಾಷ್ಟ್ರೀಯ ಏಕತೆಗೆ ಒತ್ತು ನೀಡಲಾಗುತ್ತಿದೆ ಎಂದ ಅವರು, ಪ್ರಸಕ್ತ 157 ಹೆಣ್ಣು ಹಾಗೂ 206 ಗಂಡು ಮಕ್ಕಳ ಸಹಿತ 350ಕ್ಕೂ ಅಧಿಕ ವಿದ್ಯಾರ್ಥಿಗಳು ಕಲಿಕೆಯಲ್ಲಿ ತೊಡಗಿಸಿ ಕೊಂಡಿದ್ದಾರೆ ಎಂದು ವಿವರಿಸಿದರು.
ಕೇಂದ್ರ ಯೋಜನೆ ಅನುಷ್ಠಾನ: ಕೇಂದ್ರೀಯ ವಿದ್ಯಾಲಯದಲ್ಲಿ ಕೇಂದ್ರ ಸರಕಾರದ ಡಿಜಿಟಲ್ ಇಂಡಿಯಾ, ಏಕ್ ಭಾರತ್-ಶ್ರೇಷ್ಠ ಭಾರತ್, ಸ್ವಚ್ಛ ಭಾರತ್ ಆಭಿಯಾನ ಸೇರಿದಂತೆ, ದೇಶದ ವಿವಿಧ ರಾಜ್ಯಗಳ ಕಲೆ, ಸಂಸ್ಕøತಿ, ಭಾಷಾ ಮಹತ್ವದಂತಹ ವಿಚಾರಗಳನ್ನು ಮಕ್ಕಳಿಗೆ ಪರಿಚಯಿಸುತ್ತಾ, ಹಸಿರು ಶಾಲೆಯ ಪರಿಜ್ಞಾನದೊಂದಿಗೆ ಶುದ್ಧಗಾಳಿ, ಶುದ್ಧ ನೀರು, ನಿರ್ಮಲ ಪರಿಸರದ ಕಡೆಗೆ ಗಮನ ಹರಿಸುತ್ತಿರುವದಾಗಿ ನೆನಪಿಸಿದರು.
ಆನಂದಮಯ ದಿನ: ಇಲ್ಲಿ ಪ್ರತಿ ಶನಿವಾರ ಮಕ್ಕಳಿಗೆ ಪಠ್ಯಕ್ರಮ ರಹಿತ ಚಟುವಟಿಕೆಯೊಂದಿಗೆ ಶಾಲೆಗಳಿಗೆ ಪುಸ್ತಕ ಚೀಲದ ಹೊರೆಯಿಲ್ಲದೆ ಬಂದು ಪಠ್ಯೇತರ ಚಟುವಟಿಕೆ ಮೂಲಕ ಆನಂದದಿಂದ ಕಳೆಯಲು ಅನುವು ಮಾಡಿಕೊಡಲಾಗುತ್ತಿದೆ ಎಂದು ಪ್ರಾಂಶುಪಾಲರು ಉದಾಹರಿಸಿದರು.
ಕ್ರೀಡೆ-ಪ್ರತಿಭೆಗೆ ಪ್ರೋತ್ಸಾಹ: ಕೇಂದ್ರೀಯ ವಿದ್ಯಾಲಯದಲ್ಲಿ ಕಲಿಯುವ ಪ್ರತಿ ವಿದ್ಯಾರ್ಥಿಯ ಪ್ರತಿಭೆ ಗುರುತಿಸಿ, ಕ್ರೀಡೆ, ಕಲೆ, ಸಾಹಿತ್ಯ, ಸಂಸ್ಕøತಿ ಮತ್ತಿತರ ಕ್ಷೇತ್ರಗಳಲ್ಲಿ ಮುನ್ನಡೆಗೆ ಪ್ರೋತ್ಸಾಹಿಸುತ್ತಿದ್ದು, ಅನೇಕರು ಆ ರೀತಿ ಸಾಧನೆಯನ್ನು ತೊಡಗಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು. ಕೇಂದ್ರೀಯ ಪಠ್ಯಕ್ರಮಗಳೊಂದಿಗೆ ಇಲ್ಲಿನ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಗಳಲ್ಲಿ ಶೇ. 100 ಸಾಧನೆ ತೋರುತ್ತಿದ್ದಾರೆ ಎಂದು ಅರ್ಜುನ್ಸಿಂಗ್ ಹೆಮ್ಮೆಯ ನುಡಿಯಾಡಿದರು.